ಬೆಂಗಳೂರು: ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ತಾನು ಗೆಲ್ಲಬಹುದಾದ 7 ಸ್ಥಾನಗಳಿಗೆ ಕಾಂಗ್ರೆಸ್ ಹೈಕಮಾಂಡ್ ಅಭ್ಯರ್ಥಿ ಹೆಸರು ಅಖೈರುಗೊಳಿಸಿದ್ದು, ಶನಿವಾರ ಸಂಜೆ ಪಟ್ಟ ಹೊರಬೀಳುವ ಸಾಧ್ಯತೆ ಯಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಕ್ಷಣದವರೆಗೂ ತೂಗುಯ್ಯಾಲೆಯಲ್ಲಿ ಇಸ್ಮಾಯಿಲ್ ತಮಟಗಾರ, ಸಚಿವ ಎನ್.ಎಸ್. ಬೋಸುರಾಜು, ಕೆ. ಗೋವಿಂದರಾಜು ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ಯ ನಾಯಕತ್ವ ನೀಡಿದ್ದ 20 ಹೆಸರಿದ್ದ ಪಟ್ಟಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರ ರಣದೀಪ್ ಸಿಂಗ್ ಸುರ್ಜೇವಾಲ ಮುಷ್ಕರಿಸಿದ್ದು, ಜೂ.13ಕ್ಕೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇರುವ ಸಾಧ್ಯತೆಯಿರುವ 1 ಸ್ಥಾನ ಮತ್ತು ಜಗದೀಶ್ ಶೆಟ್ಟರ್ ರಾಜೀನಾಮೆ ಯಿಂದ ತೆರವಾಗಿರುವ ಸ್ಥಾನ ಸೇರಿ ಒಟ್ಟು ಸ್ನಾನಗಳಿಗೆ ಹೆಸರು ಅಖೈರು ಗೊಳಿಸಿದ್ದಾರೆ ಎನ್ನಲಾಗಿದೆ. ಶೆಟ್ಟರ್ ಸಮುದಾಯಕ್ಕೆ ಸ್ಥಾನವನ್ನು ಉತ್ತರ ಕರ್ನಾಟಕದ ಉತ್ತರ ಕರ್ನಾಟಕದ ಪಂಚಮಸಾಲಿ ಸಮುದಾಯಕ್ಕೆ ನೀಡಲು ತೀರ್ಮಾನಿಸಲಾಗಿದ್ದು, ಆ ಅಭ್ಯರ್ಥಿ ಯಾರು ಎಂಬುದನ್ನು ಖರ್ಗೆ ನಿರ್ಧರಿಸಲಿದ್ದಾರೆ.
ಅದರಂತೆ ಒಐಸಿ ಕೋಟಾದಡಿ ಯತೀಂದ್ರ ಸಿದ್ದರಾಮಯ್ಯ ಮತ್ತು ಸಚಿವ ಬೋಸರಾಜು, ಪರಿಶಿಷ್ಠ ಜಾತಿ ಕೋ ಜಾತಿ ಕೋಟಾದಲ್ಲಿ ಕಾರ್ಯಾಧ್ಯಕ್ಷ ವಸಂತ್ ಕುಮಾರ್, ಪರಿಶಿಷ್ಟ ಪಂಗಡದಿಂದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಒಕ್ಕಲಿಗ ಕೋಟಾದಿಂದ ಮುಖ್ಯಮಂತ್ರಿಗಳ ರಾಜಕೀಯ ಕಾವ್ಯದರ್ಶಿ ಗೋವಿಂದರಾಜು, ಮುಸ್ಲಿಂ ಕೋಟಾದಲ್ಲಿ ಇಸ್ಲಾಯಿಲ್ ತಮಟಗಾರ ಕ್ರಿಶ್ಚಿಯನ್ ಕೋಟಾದಲ್ಲಿ ಐವನ್ ಡಿಸೋಜಾ ಅವರ ಹೆಸರು ಅಂತಿಮಗೊಂಡಿದೆ.