July 8, 2025
n61336591617171714345915f3992f25be537194b4399df13d6c561da227a20a681ba868e6ad6b4a15ee4f1

ಬೆಂಗಳೂರು: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣರನ್ನು ಎಸ್ ಐಟಿ ಬಂಧಿಸಿದೆ. ಮಹಿಳಾ ಅಧಿಕಾರಿಗಳೇ ಪ್ರಜ್ವಲ್ ರನ್ನು ಬಂಧಿಸಿ ಕರೆದೊಯ್ದಿದ್ದಾರೆ.
ಅರೆಸ್ಟ್ ಆಗುವ ಭೀತಿಯಿಂದಾಗಿ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ (Prajwal Revanna) 35 ದಿನಗಳ ನಂತರ ಅರೆಸ್ಟ್ ಆಗಿದ್ದಾರೆ.ಜರ್ಮನಿಯಿಂದ ಏರ್ ಪೋರ್ಟ್ ಗೆ ಆಗಮಿಸುತ್ತಿದ್ದಂತೆ ಪ್ರಜ್ವಲ್‌ರನ್ನು ಮಹಿಳಾ ಅಧಿಕಾರಿಗಳು ಬಂಧಿಸಿದ್ದಾರೆ.

ಗುರುವಾರ ಮಧ್ಯರಾತ್ರಿ 12:40 ರ ವೇಳೆಗೆ ಪ್ರಜ್ವಲ್‌ ಬಂಧನವಾಯಿತು. ಮೂವರು ಮಹಿಳಾ ಅಧಿಕಾರಿಗಳ ಮೂಲಕ ಆರೋಪಿಯನ್ನು ಎಸ್‌ ಐಟಿ ಬಂಧಿಸಿದೆ. ಜೀಪ್‌ ಚಾಲಕರನ್ನು ಹೊರತು ಪಡಿಸಿದರೆ, ಉಳಿದವರೆಲ್ಲ ಮಹಿಳಾ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಆರೋಪಿಗೆ ಮುಜುಗರ ಉಂಟುಮಾಡುವ ನಿಟ್ಟಿನಲ್ಲಿ ಬಂಧನವಾಗಿದೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ಸಂತ್ರಸ್ತ ಮಹಿಳೆಯರಿಗೆ ನಾವಿದ್ದೇವೆ ಎಂದು ಧೈರ್ಯ ತುಂಬುವ ನಿಟ್ಟಿನಲ್ಲಿ ಈ ರೀತಿ ಬಂಧಿಸಿರಬಹುದು ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *