July 11, 2025
n612258308171686315056245bb5b556616bd5eaa46fb0454c68eac8bbcaa888e9c42a2b72f46e6b9de0956

ಹುಬ್ಬಳ್ಳಿ: ನಗರದ ಉತ್ತರ ಸಂಚಾರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಇಲ್ಲಿನ ಉಣಕಲ್ಲ ಕ್ರಾಸ್ ಬಳಿಯ ರಾಜನಗರ ಮಾರ್ಗದ ರೈಲ್ವೆ ಮೇಲ್ಸೇತುವೆಯಲ್ಲಿ ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೂಲತಃ ತಾಲೂಕಿನ ಅರಳಿಕಟ್ಟಿ ಗ್ರಾಮದ ಇಲ್ಲಿನ ಲಿಂಗರಾಜ ನಗರ ನಿವಾಸಿ ನಾಗಪ್ಪ (ನಾಗರಾಜ) ಹಂಚಿನಮನಿ (45) ಆತ್ಮಹತ್ಯೆ ಮಾಡಿಕೊಂಡವರು.

ಆಗಸ್ಟ್ 10ರಂದು ವಿದ್ಯಾನಗರ ಠಾಣೆಯಿಂದ ವರ್ಗಾವಣೆಗೊಂಡು ಉತ್ತರ ಸಂಚಾರ ಠಾಣೆಗೆ ಹಾಜರಾಗಿದ್ದ ಇವರು ಕಳೆದ ಎರಡು ತಿಂಗಳಿಂದ ಕರ್ತವ್ಯಕ್ಕೆ ಗೈರ ಹಾಜರಿದ್ದರು. ಮಾನಸಿಕವಾಗಿ ಅಸ್ವಸ್ಥರಾಗಿದ್ದ ಇವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೃತರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *