
ಹುಬ್ಬಳ್ಳಿ : ಸಾದ್ಯ ಲೋಕಸಭೆ ಮತದಾನದ ನಂತರ ಸದ್ಯ ಇದೀಗ ಕರ್ನಾಟಕದಲ್ಲಿ ನಾಮನಿರ್ದೇಶನ ಪರಿಷತ್ ಸದಸ್ಯರ ಆಯ್ಕೆಗೆ ಕೆಪಿಸಿಸಿ ಸರ್ಕಸ್ ನಡೆಸುತ್ತಿದೆ.ಈ ಬಾರಿ ಆದರೂ ನಾಮ ನಿರ್ದೇಶಿತ ಪರಿಷತ್ ಸ್ಥಾನಕ್ಕೆ ಧಾರವಾಡ ಜಿಲ್ಲೆಯ ಹುರಿಯಾಳುಗಳಿಗೆ ಅದೃಷ್ಟ ಕೂಡಿ ಬರಲಿದಿಯಾ ಎನ್ನುವ ಪ್ರಶ್ನೆ ಕಾಡುತ್ತಿದೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಭಾವುಟ ಹಾರಿಸುವಲ್ಲಿ ಹಗಲಿರುಳು ತಮ್ಮ ಶ್ರಮ ವಹಿಸಿರುವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಪಾಟೀಲ್ ಹಾಗು ನಗರ ಪ್ರದೇಶದ ಅಧ್ಯಕ್ಷ ಅಲ್ತಾಫ್ ಹುಸೈನ್ ಹಳ್ಳೂರ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ
ಅಲ್ಪ ಸಂಖ್ಯಾತ ಕೋಟಾದಲ್ಲಿ ಡಿಕೆ ಶಿವಕುಮಾರ್ ಪಾಳಯದಲ್ಲಿ ಗುರುತಿಸಿಕೊಂಡಿರುವ ನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ .ಇನ್ನು ಮತ್ತೊಂದು ಕಡೆ ನಾಮದಾರಿ ರೆಡ್ಡಿ ಸಮುದಾಯ ಪ್ರತಿನಿಧಿಸುವ ಗ್ರಾಮೀಣ ಅಧ್ಯಕ್ಷ ಅನಿಲ್ ಕುಮಾರ್ ಪಾಟೀಲ್ ಸಿ ಎಂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದು ಶತಾಯ ಗತಾಯ ಅವರ ಪ್ರಯತ್ನದಿಂದ MLC ಸ್ಥಾನ ಗಿಟ್ಟಿಸಿಕೊಳ್ಳಬೇಕು ಎನ್ನುವ ಪ್ರಯತ್ನ ನಡೆಸುತ್ತಿದ್ದಾರೆ.
ಇನ್ನು ಧಾರವಾಡ ಜಿಲ್ಲೆಯಲ್ಲಿ ಇವರಿಬ್ಬರನ್ನು ಹೊರತುಪಡಿಸಿ ಮುಖಂಡರಾದ ರಾಬರ್ಟ್ ದದ್ದಾಪುರಿ,ವೀರಣ್ಣ ಮತ್ತಿಕಟ್ಟಿ ಹಾಗೂ ವಿಜಯ್ ಕುಲಕರ್ಣಿ ಕೂಡ ತಮ್ಮದೇ ಶೈಲಿಯಲ್ಲಿ ಲಾಬಿ ನಡೆಸುತ್ತಿದ್ದಾರೆ