September 17, 2024

ಬೆಳಗಾವಿ : ಪೆಟ್ರೋಲ್‌ ಬಂಕ್ ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಭಾರತ್ ಪೆಟ್ರೋಲ್ ಪಂಪ್ ಹೊತ್ತಿ ಉರಿದ ಘಟನೆ ಬೆಳಗಾವಿಯ ಗೋವಾ ವೆಸ್ ಸರ್ಕಲ್ ಬಳಿ ನಡೆದಿದೆ.

ಇಲ್ಲಿನ ಭಾರತ ಪೆಟ್ರೋಲ್ ಪಂಪ್ ಗೆ ಇಂದು ಮುಂಜಾನೆ ಏಕಾಏಕಿ ಬೆಂಕಿ ಹೊತ್ತಿ ಉರಿಯಲು ಆರಂಭಿಸಿದೆ‌. ಪೆಟ್ರೋಲ್ ಬಂಕ್ ಬಂದ್ ಇರುವದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಆದರೆ ಪೆಟ್ರೋಲ್ ಪಂಪ್ ಕ್ಯಾಬಿನ್ (ಆಫೀಸ್) ಹೊತ್ತಿ ಉರಿದ ಕಾರಣ ಸಂಪೂರ್ಣ್ ಭಸ್ಮಗೊಂಡಿದೆ.
ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.

Leave a Reply

Your email address will not be published. Required fields are marked *