July 12, 2025
n611198572171651966312261c6ac38fd0836a5d5449aec4f4d09834c177450d3de15bbbd38602f2cdbb621

ಶಿವಮೊಗ್ಗ: ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಯುವಕರು ಮೃತಪಟ್ಟ ಘಟನೆ ಆಯನೂರು ಸಮೀಪದ ಚನ್ನಹಳ್ಳಿ ಬಳಿ ನಡೆದಿದೆ. ಚನ್ನಹಳ್ಳಿಯ ಅಭಯ್‌ (14), ಮಾಲತೇಶ್‌ (28) ಮೃತಪಟ್ಟವರು.

ಚನ್ನಹಳ್ಳಿ ಗ್ರಾಮದ 12 ಅಡಿ ಆಳದ ಕೃಷಿ ಹೊಂಡಕ್ಕೆ ಈಜಲು ಹೋಗಿದ್ದ ಅಭಯ್‌ ಮೇಲೆ ಬರಲಾಗದೆ ಒದ್ದಾಡುತ್ತಿದ್ದ, ಅಭಯ್‌ ಧ್ವನಿ ಕೇಳಿ ಸ್ವಲ್ಪ ದೂರದಲ್ಲೇ ಇದ್ದ ಮಾಲತೇಶ್‌ ರಕ್ಷಣೆಗೆ ಧಾವಿಸಿದ್ದಾನೆ.
ಈ ವೇಳೆ ಮಾಲತೇಶ್‌ ಸಹ ಮೃತಪಟ್ಟಿದ್ದಾನೆ. ಶುಕ್ರವಾರ ಮಾಲತೇಶ್‌ ಮದುವೆ ವಾಷಿಕೋತ್ಸವವಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *