October 13, 2025
Suicide2-1

ಗದಗ: ಪತ್ನಿಯನ್ನು ತವರಿಗೆ ಕರೆದುಕೊಂಡು ಹೋಗಿದ್ದಕ್ಕೆ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಶಪ್ಪ ಕಟ್ಟಿಮನಿ(40) ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ.
ನನ್ನ ಸಾವಿಗೆ ಅಳಿಯಂದಿರು ಕಾರಣ ಎಂದು ವಿಡಿಯೋ ಮಾಡಿ, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗದಗದಲ್ಲಿ ಸರ್ಕಾರಿ ಶಾಲಾ ಶಿಕ್ಷಕರಾಗಿ ಮೃತ ಈಶಪ್ಪ ಕಾರ್ಯನಿರ್ವಹಿಸುತ್ತಿದ್ದರು ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾತ್ರಿ ಪತ್ನಿಯೊಂದಿಗೆ ಈಶಪ್ಪ ಜಗಳವಾಡಿದ್ದು, ಈ ವೇಳೆ ಮನೆಗೆ ಬಂದ ಅಳಿಯಂದಿರು ಪ್ರಶ್ನಿಸಿ ನಮ್ಮ ತಂಗಿ ಜೊತೆ ಏಕೆ ಜಗಳ ಮಾಡ್ತೀಯಾ ಎಂದು ಹಿಂಸೆ ನೀಡಿ ಈಶಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ತಮ್ಮ ತಂಗಿಯನ್ನು ಕರೆದುಕೊಂಡು ಹೋಗಿದ್ದಾರೆ. ಇದರಿಂದ ಮನನೊಂದು ಈಶಪ್ಪ ನೇಣಿಗೆ ಶರಣಾಗಿದ್ದಾರೆ. ಗದಗ ಶಹರ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *