December 7, 2024

ಹುಬ್ಬಳ್ಳಿ : ಉತ್ತರ ಪ್ರದೇಶ ರಾಜ್ಯದ ಪ್ರತಿಷ್ಠಿತ ರಾಯಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿರುವ ರಾಷ್ಟ್ರೀಯ ಕಾಂಗ್ರೆಸ್‍ನ ಉಚ್ಚ ನಾಯಕ , ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭಾರಿ ಮತಗಳ ಅಂತರದಿಂದ ಜಯಭೇರಿ ಭಾರಿಸುವದು ನಿಶ್ಚಿತ ಎಂದು ಹಿರಿಯ ಕಾಂಗ್ರೆಸ್ ಧುರೀಣ ಡಾ. ಶರಣಪ್ಪ ಕೊಟಗಿ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಕಟಣೆಯಲ್ಲಿ ಅವರು, ಇದೇ ದಿ.15 ರಿಂದ 18ರವರೆಗೆ ಕರ್ನಾಟಕದಿಂದ ರಾಯಬರೇಲಿಗೆ ತೆರಳಿದ ನಿಯೋಗದ ನೇತೃತ್ವವಹಿಸಿದ್ದ ತಾವು 4 ದಿನಗಳವರೆಗೆ ಕ್ಷೇತ್ರದ ನಗರ, ಪಟ್ಟಣಗಳು,‌ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗಿ ಸಂಚರಿಸಿ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರಿಂದ ರಾಹುಲ್ ಪರ ಮತಚಲಾಯಿಸುವ ಬಗ್ಗೆ ಒಕ್ಕೊರಲಿನ ಅಭಿಪ್ರಾಯ ಕೇಳಿ ಬಂದಿತು.
ಇದೇ ಸಂದರ್ಭದಲ್ಲಿ ಈ ಕ್ಷೇತ್ರದಿಂದ ಹಿಂದೆ ಸ್ಪರ್ಧಿಸಿ ಗೆದ್ದಿರುವ ರಾಹುಲ್ ಅವರ ತಾಯಿ ಸೋನಿಯಾ ಗಾಂಧಿ ಅವರನ್ನು ಮತದಾರರು ಮನತುಂಬ ಸ್ಮರಿಸಿದರು.‌ ಈ ಹಿನ್ನೆಲೆಯಲ್ಲಿ ರಾಹುಲ್‍ರವರ ಗೆಲುವು ಶತಃಸಿದ್ದ ಎಂದಿದ್ದಾರೆ. ಕರ್ನಾಟಕದಿಂದ ರಾಯಬರೇಲಿಗೆ ತೆರಳಿದ್ದ ನಿಯೋಗದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಾಜಿ ಸೈನಿಕರ ಘಟಕದ ಅಧ್ಯಕ್ಷ ಕರ್ನಲ್ ರೋಹಿತ್ ಚೌದರಿ , ಕೆಪಿಸಿಸಿ ಮಾಜಿ ಸೈನಿಕರ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಟಿ, ಕೆಪಿಸಿಸಿ ಮಾಜಿ ಸೈನಿಕರ ಘಟಕದ ಉಪಾಧ್ಯಕ್ಷ ಎಂ.ಎಚ್ ಚಳ್ಳಮರದ ಶೇಖ್ ,ಮಾಜಿ ಸೈನಿಕರ ಘಟಕದ ಪದಾಧಿಕಾರಿಗಳಾದ ದಿನೇಶ ರಾವ್ , ಕರ್ನಲ್ ಸುಧೀರ ಭಾಗವಹಿಸಿದ್ದರು ಎಂದು ಡಾ. ಶರಣಪ್ಪ ತಿಳಿಸಿದ್ದಾರೆ.

Leave a Reply

Your email address will not be published. Required fields are marked *