July 1, 2025
IMG_20240522_142533

ಕಲಘಟಗಿ: 6 ತಿಂಗಳ ಜಿಂಕೆ ಮರಿಯೊಂದು ಸಾವನ್ನೊಪ್ಪಿರುವ ಘಟನೆ ಪಟ್ಟಣದ ಮಂಗೇಶ ಕೆರೆಯಲ್ಲಿ ನಡೆದಿದೆ.

ನೀರು ಕುಡಿಯಲು ಜಿಂಕೆ ಮರಿ ಮಂಗೇಶ ಕೆರೆಗೆ ಬಂದ ಸಂದರ್ಭದಲ್ಲಿ ನಾಯಿಗಳು ಅಟ್ಟಿಸಿಕೊಂಡ ಬಂದ ಕಾರಣಕ್ಕೆ ತಪ್ಪಿಸಿಕೊಂಡು ಹೋಗುವಾಗ ಆಯತಪ್ಪಿ ಕೆರೆಯಲ್ಲಿ ಜಿಗಿದಿದೆ. ಜಿಂಕೆ ಮರಿ ಹಣೆಗೆ ಕಲ್ಲಿನಿಂದ ಪೆಟ್ಟು ಬಿದ್ದ ಕಾರಣ ಕೆರೆಯಲ್ಲಿ ಬಿದ್ದು ಸಾವನ್ನೊಪ್ಪಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಉಪ ವಲಯ ಅರಣ್ಯ ಅಧಿಕಾರಿ ರಮೇಶ್ ಕಡೆಮನಿ, ಅರಣ್ಯ ಸಿಬ್ಬಂದಿ ಮೌನೇಶ್‌ ಲಿಂಗ ಶೆಟ್ಟಿ ಹಾಗೂ ಯುವಕರು ಇದ್ದರು.

Leave a Reply

Your email address will not be published. Required fields are marked *