ಕುಂದಗೋಳ: ಮನೆಯಿಂದ ಹೊರಗೆ ಹೋದ ಮಹಿಳೆಯೊಬ್ಬಳು ವಾಪಸ್ ಬರದೇ ಕಾಣೆಯಾದ ಘಟನೆ ಕುಂದಗೋಳ ಮತಕ್ಷೇತ್ರದ ರೇವಡಿಹಾಳ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.
ಗ್ರಾಮದ ನಿವಾಸಿ ನಿರ್ಮಲಾ ಶೇಖಪ್ಪ ಅಂಬ್ಲಿಕೊಪ್ಪ(40) ಕಾಣೆಯಾದ ಮಹಿಳೆ. ರೇವಡಿಹಾಳ ಗ್ರಾಮದ ಮನೆಯಿಂದ – ಮಾ. 8ರಂದು ಬೆಳಗ್ಗೆ ಹೋದವರು ವಾಪಸ್ ಬಂದಿಲ್ಲ ಎಂದು ಅವರ ಪತಿ ಶೇಖಪ್ಪ ಅಂಬ್ಲಿಕೊಪ್ಪ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.