September 19, 2024

ಬೆಂಗಳೂರು: ಪತ್ನಿ ಮತ್ತು ವಿಕಲಚೇತನ ಮಗನಿಗೆ ಜೀವನಾಂಶ ಪಾವತಿಸದ ಪತಿಯ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಪತಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ದೇಶನ ನೀಡಿದೆ. ಪ್ರಕರಣ ಸಂಬಂಧ ಪತ್ನಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ಅನಂತ್ ರಾಮನಾಥ್ ಹೆಗಡೆ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಪತಿಯ 1,276 ಚದರ ಅಡಿ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಪತ್ನಿ ಇತರ ಆಸ್ತಿ ವಿವರಗಳನ್ನು ಒದಗಿಸಿದರೆ, ಅದರಲ್ಲಿಯೂ ಭಾಗಿದಾರರಾಗಿರುತ್ತಾರೆ ಎಂದು ಹೇಳಿದೆ. ಅಲ್ಲದೆ 2012ರ ಏ.12ರಿಂದ ಮಾಸಿಕ ಜೀವನಾಂಶವಾಗಿ ತಲಾ 5,000 ರೂ. ಪಾವತಿಸುವಂತೆ ಸೂಚನೆ ನೀಡಿ ಆದೇಶಿಸಿದೆ. ಜತೆಗೆ ನಿರ್ವಹಣೆಯನ್ನು ತಲಾ 5,000 ರೂ.ಗೆ ಹೆಚ್ಚಿಸಿತು. ಮಗ ವಿಕಲಚೇತನನಾಗಿರುವುದರಿಂದ, ಮೊತ್ತವು ಸಾಧಾರಣವಾಗಿದೆ ಮತ್ತು ಕುಟುಂಬ ನ್ಯಾಯಾಲಯವು ಅದಕ್ಕೆ ಅನುಗುಣವಾಗಿ ಆದೇಶಿಸಬೇಕಾಗಿತ್ತು ಎಂದು ಪೀಠ ಹೇಳಿದೆ.

ಮುಂದುವರಿದು, ಪತಿ ಕೌಟುಂಬಿಕ ನ್ಯಾಯಾಲಯವು ತನ್ನ ಮೇಲೆ ವಿಧಿಸಿದ ಹೊಣೆಗಾರಿಕೆ ನಿರ್ವಹಿಸಿಲ್ಲ.1882ರ ಆಸ್ತಿ ವರ್ಗಾವಣೆ ಕಾಯ್ದೆಯ ಸೆಕ್ಷನ್ 39ರ ಅಡಿಯಲ್ಲಿ, ನಿರ್ವಹಣೆಯ ಬಾಕಿಯು ಆಸ್ತಿಯ ಮೇಲೆ ಶುಲ್ಕವನ್ನಾಗಿಸುವುದಕ್ಕೆ ಅವಕಾಶವಿದೆ. ಪತಿಯಾದವರು ಈ ಹಿಂದಿನ ಆದೇಶ ಪಾಲಿಸಿಲ್ಲ. ಆದ್ದರಿಂದ ಅರ್ಜಿದಾರರಿಗೆ (ಪತ್ನಿ ಮತ್ತು ಮಗ) ಪಾವತಿಯ ಆಸ್ತಿಯ ಮೇಲೆ ಭಾಗ ಪಡೆಯಬಹುದು ಎಂದು ಪೀಠ ಅಭಿಪ್ರಾಯ ಪಟ್ಟಿದೆ.
2002ರಲ್ಲಿ ಪತಿ ಮನೆಯಿಂದ ಹೊರನಡೆದಿದ್ದ ಮಹಿಳೆ, ಜೀವನಾಂಶ ನೀಡುವಂತೆ ಕೋರಿದ್ದಳು. ಆರಂಭದಲ್ಲಿ ಪತ್ನಿ ಮತ್ತು ಮಗನಿಗೆ ಕ್ರಮವಾಗಿ 2,000 ಮತ್ತು 1,000 ರೂ.ಗಳ ಮಾಸಿಕ ಮೊತ್ತ ನೀಡಲಾಯಿತು. ದಶಕದ ನಂತರ, ಪತ್ನಿ ಮತ್ತು ಅವರ ಮಗ ತಲಾ 5,000 ರೂ.ಗೆ ಹೆಚ್ಚಿಸಲು ಕೋರಿದರು.

ಸೆ.2018 ರಲ್ಲಿ, ಕೌಟುಂಬಿಕ ನ್ಯಾಯಾಲಯವು ಪತಿಗೆ ತಲಾ 3,000 ರೂ.ಗಳನ್ನು ಪಾವತಿಸುವಂತೆ ನಿರ್ದೇಶನ ನೀಡಿತು. ಆದರೆ, ಮೊತ್ತವನ್ನು ಮತ್ತಷ್ಟು ಹೆಚ್ಚಳ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದು, ಪರಿಹಾರ ಮೊತ್ತ ಕಡಿಮೆಯಿದೆ. ಆದ್ದರಿಂದ ಹೆಚ್ಚಳ ಮಾಡಬೇಕು. ಜತೆಗೆ, ಪತಿ ಬಾಕಿ ಪಾವತಿಸಿಲ್ಲ ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಪತಿ ಕೆಲವು ಸ್ಥಿರಾಸ್ತಿಗಳನ್ನು ಮಾರಾಟ ಮಾಡಿದ್ದಾರೆ, ತಿಂಗಳಿಗೆ 5,000 ರೂ.ಗಳನ್ನು ಪಾವತಿಸಬಹುದು ಮತ್ತು ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕೋರಿದ್ದರು.

Leave a Reply

Your email address will not be published. Required fields are marked *