ಬೆಂಗಳೂರು: ಮೂರು ದಿನಗಳ ಹಿಂದೆ ನಗರದ ಹೊರವಲಯದ ಸರ್ಜಾಪುರದಲ್ಲಿ ನಡೆದಿದ್ದ ಅಪ್ರಾಪ್ತನ ಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಸ್ವತಃ ಅಣ್ಣನೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಆನ್‍ಲೈನ್ ಗೇಮ್ ಆಡುವುದಕ್ಕೆ ಮೊಬೈಲ್ ಕೊಡದ ಕಾರಣ ಬಾಲಕನ ಅಣ್ಣನೇ ಹತ್ಯೆಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೊಬೈಲ್ಗಾಗಿ ತಮ್ಮನನ್ನೇ ಕೊಂದ ಅಣ್ಣ
ಮೇ 15ರಂದು ಪ್ರಾಣೇಶ್ (15) ಶವ ಸರ್ಜಾಪುರದ ನೆರಿಗಾ ಗ್ರಾಮದ ಹೊರವಲಯದಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಬಾಲಕನ ಸಹೋದರ ಶಿವಕುಮಾರ್ನನ್ನು ವಿಚಾರಣೆ ನಡೆಸಿದಾಗ ಆತನೇ ಹತ್ಯೆಗೈರುವುದಾಗಿ ಒಪ್ಪಿಕೊಂಡಿದ್ದಾನೆ. ಶಿವಕುಮಾರ್ ಆನ್‍ಲೈನ್ ಗೇಮ್ ಹುಚ್ಚಿಗೆ ಬಿದ್ದಿದ್ದು, ಆಟ ಆಡಲು ಮೊಬೈಲ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಸ್ವಂತ ತಮ್ಮನನ್ನೇ ಹತ್ಯೆಗೈದಿದ್ದಾನೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ರಜೆ ಕಳೆಯಲು ಬಂದು ಹತನಾದ
ಈ ಇಬ್ಬರು ಬಾಲಕರು ಆಂದ್ರ ಪ್ರದೇಶ ಮೂಲಕ ಚೆನ್ನಮ್ಮ ಮತ್ತು ಬಸವರಾಜ್ ಹಾಗೂ ದಂಪತಿಯ ಮಕ್ಕಳು. ಈ ದಂಪತಿ ಕೆಲಸ ಅರಸಿಕೊಂಡು ಕಳೆದ ಮೂರು ತಿಂಗಳ ಹಿಂದೆ ನೆರಿಗಾ ಗ್ರಾಮಕ್ಕೆ ಬಂದಿದ್ದು, ದಂಪತಿ ಹಾಗೂ ಹಿರಿಯ ಮಗ ಶಿವಕುಮಾರ್ ಗಾರೇ ಕೆಲಸ ಮಾಡಿಕೊಂಡಿದ್ದರು. ದಂಪತಿಯ ಕಿರಿಯ ಮಗ ಪ್ರಾಣೇಶ್ ಅಜ್ಜಿಯ ಮನೆಯಲ್ಲಿದ್ದು 7ನೇ ತರಗತಿ ಓದುತ್ತಿದ್ದ. ಇದೀಗ ಬೇಸಿಗೆ ರಜೆ ಇದ್ದಿದ್ದರಿಂದ ಪೋಷಕರೊಂದಿಗೆ ನೆರಿಗಾ ಗ್ರಾಮಕ್ಕೆ ಬಂದಿದ್ದ. ಆದರೆ ಕ್ಷುಲ್ಲಕ ಕಾರಣದಿದಂದ ಅಣ್ಣನಿಂದಲೇ ಹತ್ಯೆಗೊಳಗಾಗಿದ್ದಾನೆ.
ಸುತ್ತಿಗೆಯಿಂದ ಹೊಡೆದು ಕೊಲೆ
ಮನೆಯಲ್ಲಿದ್ದ ಮೊಬೈಲಿನಲ್ಲಿ ಶಿವಕುಮಾರ್ ಸದಾ ಆನ್‍ಲೈನ್ ಗೇಮ್ ಆಡುತ್ತಿದ್ದ. ಪ್ರಾಣೇಶ್ ಮನೆಗೆ ಬಂದನಂತರ ಮೊಬೈಲ್ ಆತನ ಕೈಸೇರಿತ್ತು. ಅವನು ಗೇಮ್ ಆಡಲು ಶುರು ಮಾಡಿದ್ದ. ಪ್ರಾಣೇಶ್ ಬಳಿ ಮೊಬೈಲ್ ಕೇಳಿದಾಗ ಶಿವಕುಮಾರ್ ಕೇಳುತ್ತಿದ್ದ. ಆದರೆ ಪ್ರಾಣೇಶ್ ಮೊಬೈಲ್ ನೀಡುತ್ತಿರಲಿಲ್ಲ. ಇದರಿಂದ ತಮ್ಮನನ್ನೆ ಹತ್ಯೆ ಮಾಡಲು ಪ್ಲಾನ್ ಮಾಡಿಕೊಂಡಿದ್ದಾನೆ.
ಆರೋಪಿ ಮೊದಲೇ ಸಂಚು ರೂಪಿಸಿಕೊಂಡಿದ್ದ ಶಿವಕುಮಾರ್, ತಮ್ಮನ ಹತ್ಯೆಗೈಯಲು ನಿರ್ಮಾಣ ಹಂತದ ಕಟ್ಟಡದಿಂದ ಸುತ್ತಿಗೆ ತಂದಿದ್ದ. ಪ್ರಾಣೇಸ್ ಬಹಿರ್ದೆಸೆಗೆ ತೆರಳಿದ್ದಾಗ, ಆತನನ್ನು ಹಿಂಬಾಲಿಸಿಕೊಂಡು ಹೋಗಿದ್ದ ಆರೋಪಿ, ಆತನ ಮೇಲೆ ದಾಳಿ ಮಾಡಿ ತಲೆಗೆ ಬಳಿಕ ನಾಪತ್ತೆಯಾಗಿದ್ದ ಪ್ರಾಣೇಶ್ ಹುಡುಕಾಟ ನಡೆಸಲು ಆರಂಭಿಸಿದಾಗ, ಏನು ,ಎದೆಬಾಗಕ್ಕೆ ಸುತ್ತಿಗೆಯಿಂದ ಹೊಡೆದು ಕೊಂದಿದ್ದ.