ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ , ರೌಡಿಗಳನ್ನು ಮಟ್ಟ ಹಾಕುವಲ್ಲಿ ಹಾಗೂ ಕೊಲೆ ಸುಲಿಗೆ ನಿಯಂತ್ರಣ ಮಾಡುವಲ್ಲಿ ವಿಫಲವಾಗಿರುವ ಅವಳಿ ನಗರದ ಪೊಲೀಸ್ ಕಮಿಷನರ್ ಹಾಗು ಡಿಸಿಪಿ ಅವರ ಮೇಲೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಸೂಚಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಗೃಹ ಸಚಿವರು ಈ ಬಗ್ಗೆ ಮಾಹಿತಿ ಕೋರಿದ್ದು ಅತಿ ಶೀಘ್ರದಲ್ಲಿ ಹುಬ್ಬಳ್ಳಿಗೆ ಕೂಡ ಬೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.ಅಲ್ಲದೆ ಅಂಜಲಿ ಕೊಲೆ ಪ್ರಕರಣದ ವಿಚಾರವಾಗಿ ಪೊಲೀಸರ ನಿರ್ಲಕ್ಷ ಸಾಬೀತು ಆಗಿರುವ ಹಿನ್ನಲೆಯಲ್ಲಿ ಸರ್ಕಾರ ತಲೆ ತಗ್ಗಿಸುವಂತಾಗಿದೆ.ಈ ಹಿನ್ನಲೆಯಲ್ಲಿ ಡ್ಯಾಮೇಜ್ ಕಂಟ್ರೋಲ್ ಗೋಸ್ಕರ ಕಮಿಷನರ್ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇನ್ನು ಅವಳಿನಗರದಲ್ಲಿ ಹೆಚ್ಚಾಗಿರುವ ಕ್ರೈಮ್ ಕಂಟ್ರೋಲ್ ಗೆ ರಾಜ್ಯದಲ್ಲಿ ಟಾಪ್ ಲಿಸ್ಟ್ ನಲ್ಲಿರು ಖಡಕ್ ಐಪಿಎಸ್ ಅಧಿಕಾರಿಯನ್ನು ನೇಮಿಸಲು ಸಕಲ ಸಿದ್ಧತೆ ಕೂಡ ಮಾಡಿಕೊಳ್ಳಲಾಗಿದೆ.ಈ ಹಿಂದೆ ಗುಲ್ಬರ್ಗ,ಹಾವೇರಿ,ಬೆಂಗಳೂರು,ಮಂಗಳೂರು ವಿಭಾಗದಲ್ಲಿ ಕೆಲಸ ಮಾಡಿರುವ ಈ ಅಧಿಕಾರಿ ರೌಡಿಗಳನ್ನು ಮಟ್ಟ ಹಾಕುವಲ್ಲಿ ಹಾಗು ಕ್ರೈಮ್ ಕಂಟ್ರೋಲ್ ಮಾಡುವಲ್ಲಿ ನಿಸ್ಸಿಮರಾಗಿದ್ದು ಇವರೇ ಬಹುತೇಕ ಮುಂದಿನ ಕಮಿಷನರ್ ಎನ್ನಲಾಗುತ್ತಿದೆ.