November 19, 2024

ಹುಬ್ಬಳ್ಳಿ ದಿ 13: ಇತ್ತೀಚೆಗೆ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಸೂರ್ಲಬ್ಬಿಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಕು. ಮೀನಾಳ ಕೊಲೆಯನ್ನು ಖಂಡಿಸಿ ಧಾರವಾಡ ಜಿಲ್ಲಾ ಅಹಿಂದ ಸಂಘಟನೆಯ ಆಶ್ರಯದಲ್ಲಿ ದಿ 13 ರಂದು ಬೃಹತ್ ಪ್ರತಿಭಟನೆ ನಡೆಯಿತು.

ನಗರದ ಕಿತ್ತೂರು ಚೆನ್ನಮ್ಮ ವೃತ್ತದಿಂದ ತಹಸೀಲ್ದಾರ್ ಕಚೇರಿ ವರೆಗೆ ಹೊರಟ ಪ್ರತಿಭಟನಾ ಮೆರವಣಿಗೆಯು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಸ್ತೆ ಮಧ್ಯ ಕುಳಿತು ಹತ್ಯೆಯನ್ನು ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರುಗಳು ಏಳಿ ಎದ್ದೇಳಿ ಹಿಂದು ಬಂಧುಗಳೇ ನತದೃಷ್ಟ ಮೀನಾ ಮದುವೆ ಮುಂದೂಡಿದಕ್ಕೆ ಇಂಥ ಕ್ರೂರ ಸಾವೆ.? ಈಗತಾನೆ ಎಸ್ ಎಸ್ ಎಲ್ ಸಿ ಯಲ್ಲಿ ಪಾಸಾದ ಸಂತೋಷದಲ್ಲಿದ್ದ ಮೀನಾಳ ಕೊಲೆ ಖಂಡಿಸಿದರಲ್ಲದೆ ಅಪ್ರಾಪ್ತ ಯುವತಿಯ ಕತ್ತು
ಕತ್ತರಿಸಿ ಹೀನವಾಗಿ ಕೊಲೆಗೈದ ಪಾಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಅಕ್ರೋಶ ವ್ಯಕ್ತಪಡಿಸಿದರು,

ನೇಹಾಳ ಹತ್ಯೆಯಾದಾಗ ಹಿಂದೂ ರಕ್ಷಕರಂತೆ ವರ್ತಿಸಿದ್ದ ಬಿಜೆಪಿಯಲ್ಲಿರುವ ಹಿಂದೂ ಹುಲಿಗಳು ಇದೀಗ ಎಲ್ಲಿ ಓಡಿ ಹೋಗಿವೆ. ಅಂದು ಹಿಂದು ಹುಲಿಗಳು ಎಂಬಂತೆ ವರ್ತಿಸಿದ್ದ ಬಿಜೆಪಿ ಹಾಗೂ ಎಬಿವಿಪಿಯ ಸೋ ಕಾಲ್ಡ್ ಲೀಡರ್ ಗಳು ಇದೀಗ ಸೊಂಡಿ ಇಲಿಗಳಂತೆ ಬಿಲ ಸೇರಿರುವುದು ಖಂಡನೀಯ‌. ನತದೃಷ್ಟ ಮೀನಾ ನಮ್ಮ ಹಿಂದು ಮನೆಯ ಮಗಳಲ್ಲವೇ, ಈ ಮಗುವಿನ ಸಾವಿನ ದ್ವನಿ ವಿರೋಧ ಪಕ್ಷ ನಾಯಕರ ಕಣ್ಣಿಗೆ ಈವರೆಗೂ ಕಾಣಿಸುತ್ತಿಲ್ಲವೇ ಅಥವಾ ಚುನಾವಣೆ ಮುಗಿಯಿತೆಂದು ಕಣ್ಮುಚ್ಚಿ ಕುಳಿತರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮುಖಂಡರು, ಅಕಸ್ಮಾತಾಗಿ ಈ ಕೊಲೆಯನ್ನು ಅನ್ಯ ಕೋಮಿನ ಯುವಕರು ಮಾಡಿದ್ದರೆ ಆಗ ಮಾತ್ರ ನಿಮ್ಮ ಕಣ್ಣು, ಕಿವಿ, ಬಾಯಿ ಅಗಲವಾಗುತ್ತಿತ್ತೆ ಎಂದು ಬಿಜೆಪಿ ನಾಯಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕೊಲೆ ಯಾರೆ ಮಾಡಿರಲಿ ತಪ್ಪು ತಪ್ಪೇ ಅಮಾಯಕ 15 ವರ್ಷದ ಬಾಲಕಿ ಮೀನಾ ಎಂಬ ವಿದ್ಯಾರ್ಥಿನಿಯನ್ನು ಪ್ರಕಾಶ್ ಎಂಬ ಯುವಕ ಕ್ರೂರವಾಗಿ ಕೊಲೆ ಮಾಡಿ ರುಂಡವನ್ನು ತೆಗೆದುಕೊಂಡು ಬಿಸಾಡಿ ಹೋಗಿದ್ದಾನೆ. ಅವನಿಗೆ ರಾಜ್ಯ ಸರ್ಕಾರವು ಕಠಿಣವಾದ ಉಗ್ರ ಶಿಕ್ಷೆಯನ್ನು ವಿಧಿಸುವಂತೆ ನೋಡಿಕೊಳ್ಳಬೇಕು ಅಥವಾ ಎನ್ ಕೌಂಟರ್ ಮಾಡಬೇಕು ಮತ್ತು ಮಿನಾಳ ಕುಟುಂಬದ ಸದಸ್ಯರುಗಳಿಗೆ ಸೂಕ್ತ ಬಂದೋಬಸ್ತು ಒದಗಿಸಬೇಕೆಂದು ರಾಜ ಸರ್ಕಾರಕ್ಕೆ ಒತ್ತಾಯಿಸಿದರಲ್ಲದೆ ಈ ಕುರಿತು ಇಲ್ಲಿವರೆಗೂ ಧ್ವನಿ ಯತ್ತದೆ ಬಿಜೆಪಿ ಹಾಗೂ ಹಿಂದು ಪರ ಸಂಘಟನೆಗಳ ಧೋರಣೆಯನ್ನು ಕಟುವಾಗಿ ಟೀಕಿಸಿದರು.

ಈ ಸಂದರ್ಭದಲ್ಲಿ ಅಹಿಂದ ಸಂಘಟನೆಯ ಜಿಲ್ಲಾಧ್ಯಕ್ಷ ಮುತ್ತಣ್ಣ ಶಿವಳ್ಳಿ, ಮಹಾನಗರ ಜಿಲ್ಲಾಧ್ಯಕ್ಷ ಬಾಬಾಜಾನ ಮುಧೋಳ, ಸಾಮಾಜಿಕ ಹೋರಾಟಗಾರ ರಾಜಶೇಖರ್ ಮೆಣಸಿನಕಾಯಿ, ಸೇರಿದಂತೆ ಮುಂತಾದ ನೂರಾರು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *