November 22, 2024

ಬೆಂಗಳೂರು : ಹಲವು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೆ ಎಸ್ ಐಟಿ ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ.
ಪ್ರಜ್ವಲ್ ರೆವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳವು ಅವರ ಪತ್ತೆಗೆ ರೆಡ್ ಕಾರ್ನರ್ ನೋಟಿಸ್ ಜಾರಿಗೆ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ..
ಪ್ರಜ್ವಲ್ ರೇವಣ್ಣ ವಿರುದ್ಧ ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದ್ದು, ಪ್ರಜ್ವಲ್ ರೇವಣ್ಣ ಸುಳಿವು ದೊರೆತಿಲ್ಲ. ರೆಡ್ ಕಾರ್ನರ್ ಸಂಬಂಧ ಎಸ್ ಐಟಿ ಅಧಿಕಾರಿಗಳು ಸಿಬಿಐ ಅಧಿಕರಿಗಳ ಜೊತೆಗೆ ಚರ್ಚಿಸಿದ್ದು, ರೆಡ್ ಕಾರ್ನರ್ ನೋಟಿಸ್ ಜಾರಿಯಾದ್ರೆ ಆರೋಪಿ ತಲೆಮರೆಸಿಕೊಂಡಿರುವ ದೇಶದ ಪೊಲೀಸರು, ಆರೋಪಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಿದ್ದಾರೆ. ನಂತರ ರೆಡ್ ಕಾರ್ನರ್ ಜಾರಿ ಮಾಡಿದ ದೇಶಕ್ಕೆ ಆರೋಪಿಯನ್ನು ಹಸ್ತಾಂತರಿಸಲಿದ್ದಾರೆ.
ಏನಿದು ರೆಡ್‌ ಕಾರ್ನರ್‌ ನೋಟಿಸ್‌?
ವಿದೇಶಿ ಕಾನೂನನ್ನ ಭಾರತೀಯ ಕಾನೂನು ಗೌರವಿಸುವ ಸೂಚಕ. ಮೋಸ್ಟ್‌ ವಾಂಟೆಡ್‌ ಆರೋಪ ಹೊತ್ತವರಿಗೆ ನೀಡುವ ನೋಟಿಸ್‌ ಇದು. ವಿದೇಶಿ ಪೊಲೀಸರೇ ಆರೋಪಿಯನ್ನ ಒಪ್ಪಿಸಿ ಅಂತ ನೀಡುವ ಮನವಿಯೇ ರೆಡ್‌ ಕಾರ್ನರ್‌ ನೋಟಿಸ್‌. ರೆಡ್‌ ಕಾರ್ನರ್‌ ನೋಟಿಸ್ ಜಾರಿಯಾದರೆ ಆರೋಪಿ ಎಲ್ಲಿದ್ದಾನೆ, ಯಾರ ಜೊತೆ ಇದ್ದಾನೆ ಅಂತ ವಿದೇಶಿ ಪೊಲೀಸರೇ ಪತ್ತೆ ಮಾಡ್ತಾರೆ. ವಿದೇಶಿ ಪೊಲೀಸರೇ ಆರೋಪಿಗೆ ಶರಣಾಗಲು ನೋಟಿಸ್‌ ಕೊಡ್ತಾರೆ. ಶರಣಾಗದಿದ್ದರೆ ವಿದೇಶಿ ಪೊಲೀಸರೇ ಆರೋಪಿಯನ್ನ ವಶಕ್ಕೆ ಪಡೆಯುತ್ತಾರೆ. ಆಮೇಲೆ ಆರೋಪಿಯನ್ನ ವಶಕ್ಕೆ ಪಡೆದು SIT ಟೀಂಗೆ ಹಸ್ತಾಂತರ ಮಾಡ್ತಾರೆ. ಆದ್ರೆ ಎಸ್‌ಐಟಿ ವಶಕ್ಕೆ ಕೊಡುವ ಮುನ್ನ ಭಾರತದ ರಾಯಭಾರ ಕಚೇರಿನೂ ಅನುಮತಿ ಕೊಡ್ಬೇಕು. ಭಾರತದ ಇಂಟರ್‌ಪೋಲ್‌‌ ಅಧಿಕಾರಿಗಳು, ಸಿಬಿಐ ಅಧಿಕಾರಿಗಳು ಆಯ್ತು ಅಂತ ಒಪ್ಪಿಗೆ ಕೊಡಬೇಕು.

Leave a Reply

Your email address will not be published. Required fields are marked *