October 13, 2025
IMG_20240510_153152

ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಕೆಎಲ್‌ಇ ಸಂಸ್ಥೆಯ ಬಿಬಿಎ ಕಾಲೇಜಿನ ವಿದ್ಯಾರ್ಥಿಗಳು ಪಕ್ಷಿಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ.

ಶಶಾಂಕ ಮತ್ತು ನಿಧಿ ಎಂಬ ಇಬ್ಬರು ವಿದ್ಯಾರ್ಥಿಗಳು ತಂಡವೊಂದನ್ನು ಕಟ್ಟಿಕೊಂಡು ಪಕ್ಷಿಗಳಿಗೋಸ್ಕರ ಗಿಡಗಳಲ್ಲಿ ಆಹಾರ ಇಡುವ ಕೆಲಸ ಮಾಡುತ್ತಿದ್ದಾರೆ. ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಇರುವ ಗಾಂಧಿ ಪ್ರತಿಮೆಯ ಆವರಣದಲ್ಲಿರುವ ಗಿಡಗಳಲ್ಲಿ ಒಂದೊಂದು ಪ್ಲೇಟ್‌ಗಳಲ್ಲಿ ಕಾಳುಗಳನ್ನು ಹಾಕಿ ಕಟ್ಟಿ ಹೋಗಿದ್ದಾರೆ. ಇದೇ ರೀತಿ ಅನೇಕ ಕಡೆಗಳಲ್ಲಿ ಮರಗಳಲ್ಲಿ ಈ ರೀತಿ ಕಾಳುಗಳನ್ನು ಕಟ್ಟಿ ಇಡುವ ಮೂಲಕ ಪಕ್ಷಿಗಳು ಹಾಗೂ ಅಳಿಲುಗಳಿಗೆ ಆಹಾರ ನೀಡುವ ಕೆಲಸವನ್ನು ಈ ತಂಡ ಮಾಡುತ್ತಿದೆ. ಸ್ವಾರ್ಥವೇ ತುಂಬಿರುವ ಈ ಪ್ರಪಂಚದಲ್ಲಿ ಈ ತಂಡದ ಸದಸ್ಯರು ಪ್ರಾಣಿ, ಪಕ್ಷಿಗಳಿಗೂ ಬದುಕುವ ಹಕ್ಕಿದೆ ಎಂಬುದನ್ನು ಈ ತಂಡದ ಸದಸ್ಯರು ತೋರಿಸಿಕೊಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ

Leave a Reply

Your email address will not be published. Required fields are marked *