October 13, 2025
360_F_299317228_821FI7n3jZsWyT532RafI6tcLabH0Zgz

ಶಿವಮೊಗ್ಗ: ನಗರದ ಲಷ್ಕರ್ ಮೊಹಲ್ಲಾದಲ್ಲಿ ಬುಧವಾರ ಸಂಜೆ ನಡೆದ ಗ್ಯಾಂಗ್ ವಾರ್ ನಲ್ಲಿ ಗಾಯಗೊಂಡಿದ್ದ ರೌಡಿಶೀಟರ್ ಯಾಸಿನ್ ಖುರೇಶಿ(30) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ನಿನ್ನೆ ಯಾಸಿನ್ ಖುರೇಶಿಗೆ ಮತ್ತೊಂದು ಗ್ಯಾಂಗ್ ಚಾಕುವಿನಿಂದ ಇರಿದಿತ್ತು. ಶಿವಮೊಗ್ಗದ ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆಯ ಸಮೀಪ ಘಟನೆ ನಡೆದಿತ್ತು.
ಯಾಸಿನ್ ಖುರೇಶಿ ಸಹಚರರ ಪ್ರತಿ ದಾಳಿಯಿಂದಾಗಿ ಇಬ್ಬರು ರೌಡಿಶೀಟರ್ ಗಳು ಮೃತಪಟ್ಟಿದ್ದರು.

ಗೌಸ್(30), ಶೋಯಬ್ ಖಲಂದರ್ ಅಲಿಯಾಸ್ ಸೇಬು(32) ಮೃತಪಟ್ಟಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯಾಸಿನ್ ಖುರೇಶಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಗ್ಯಾಂಗ್ ವಾರ್ ಸಂಬಂಧ 15 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶಿವಮೊಗ್ಗದ ಕೋಟೆ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *