ಧಾರವಾಡ : ಕರ್ನಾಟಕದ ವಾಣಿಜ್ಯ ನಗರಿ ಎಂದೇ ಪ್ರಸಿದ್ಧಿ ಪಡೆದ ಜಿಲ್ಲೆ ಧಾರವಾಡ. ಬಾಯಿ ನೀರೂರಿಸುವ ಧಾರವಾಡ ಪೇಡಾಕ್ಕೆ ಧಾರವಾಡವಲ್ಲದೆ ಬೇರೆ ಸಾಟಿಯಿಲ್ಲ! ಹುಬ್ಬಳ್ಳಿ-ಧಾರವಾಡ ಅವಳಿ ನಗರ ಹಲವು ಕಾರಣಗಳಿಂದಾಗಿ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಿದೆ. ಬೆಂಗಳೂರಿನ ನಂತರ ಅತ್ಯಂತ ದೊಡ್ಡ ನಗರ ಪಾಲಿಕೆಯನ್ನು ಹೊಂದಿರುವ ನಗರವೆಂದರೆ ಧಾರವಾಡ.
ಇಲ್ಲಿನ ರಾಜಕೀಯದ ಬಗ್ಗೆ ಹೇಳುವುದಾದರೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಇಬ್ಬರೂ ಜಿಲ್ಲೆಯಾದ್ಯಂತ ಬಿರುಸಿನ ಪ್ರಚಾರ ನಡೆಸಿ ಗೆಲುವಿನ ಮೆಟ್ಟಿಲು ಹತ್ತಲು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಹೀಗಿರುವಾಗ ಮತದಾರ ಪ್ರಭು ಯಾರ ಕೈ ಹಿಡಿಯಲಿದ್ದಾನೆ ಎಂದು ಕಾತರದಿಂದ ಕಾಯುವಂತಾಗಿದೆ. ಬಿರು ಬೇಸಿಗೆಯಲ್ಲಿ ಜಿಲ್ಲೆಯ ಪ್ರತಿ ಗ್ರಾಮ , ವಾರ್ಡ್ ಗಳಲ್ಲಿ ಬೆಂಬಿಡದೇ ಪ್ರಚಾರ ನಡೆಸಿ ಪಕ್ಷದ ಗೆಲುವಿಗೆ ಅಭ್ಯರ್ಥಿಗಳು ಶ್ರಮವಹಿಸಿದ್ದಾರೆ.
ಇನ್ನೇನು ಚುನಾವಣೆ ಮುಗಿದು ಅಭ್ಯರ್ಥಿಗಳು ರಿಲ್ಯಾಕ್ಸ್ ಮೂಡನಲ್ಲಿ ಇದ್ದಾರೆ. ಇನ್ನೂ ಲೋಕ ಸಮರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಯಾರೇ ಗೆದ್ದರೂ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ. ಬಿಜೆಪಿ ಭದ್ರಕೋಟೆಯಲ್ಲಿ ಯಾರು ಗೆಲ್ಲುತ್ತಾರೆ, ಕಳೆದುಕೊಂಡ ಕ್ಷೇತ್ರ ಮರು ವಶಕ್ಕೆ ಪಡೆಯಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದೆಯಾದರೂ, ದಶಕಗಳ ವಿಜಯ ಮುಂದುವರಿಸಲು ಬಿಜೆಪಿ ಯತ್ನಿಸಿದೆ. ಇಷ್ಟು ವರ್ಷಗಳಿಂದ ಕಳೆದುಕೊಂಡ ಕ್ಷೇತ್ರ ಮರುವಶಕ್ಕೆ ಕಾಂಗ್ರೆಸ್ ಕಾಯುತ್ತಿದೆ.
ಮತದಾರ ಪ್ರಭುಗಳು ಯಾರಿಗೆ ಒಲಿಯುತ್ತಾರೆ ಹಾಗೂ ಧಾರವಾಡ ಪೇಡಾ ಯಾರ ಬಾಯಿಗೆ ಬೀಳಲಿದೆ ಎಂದು ಇನ್ನೇನು ಕಾದು ನೋಡಬೇಕಾಗಿದೆ..