September 19, 2024

ಕುಂದಗೋಳ : ಅಪ್ರಾಪ್ತ ಬಾಲಕಿ ಕಾಣೆಯಾಗಿದ್ದು, ಯಾರೋ ಅಪರಿಚಿತರು ಪುಸಲಾಯಿಸಿ ಕರೆದುಕೊಂಡ ಹೋಗಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿ ತಾಯಿಯೇ ಕುಂದಗೋಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ರೇಷ್ಮಾ ಹಜರೆಸಾಬ್ ತಹಶೀಲ್ದಾರ (ವಯಾ : 16 ವರ್ಷ 10 ತಿಂಗಳು) ಎಂಬ ಬಾಲಕಿ ಮೇ.4 ರಂದು ಕಾಣೆಯಾಗಿದ್ದಾಳೆ. ಯಾರೋ ಅಪರಿಚಿತರು ಪುಸಲಾಯಿಸಿ ಕರೆದುಕೊಂಡು ಹೋಗಿರಬಹುದು ಎಂದು ಕಾಣೆಯಾದ ವಿದ್ಯಾರ್ಥಿನಿ ತಾಯಿ ಮೆಹಬೂಬಿ ಹಜರೆಸಾಬ್‌ ತಹಶೀಲ್ದಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಕುಂದಗೋಳ ಗ್ರಾಮೀಣ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *