August 19, 2025
IMG_20240509_101020

ಹುಬ್ಬಳ್ಳಿ: ಟ್ರಾಫಿಕ್ ಪೋಲಿಸ್‌ ಅಂದರೇ ಸಾಕು ತಕ್ಷಣವೇ ನೆನಪಿಗೆ ಬರೋದು ವಾಹನ ತಪಾಸಣೆ ನೆಪದಲ್ಲಿ ಹಣ ದೋಚುತ್ತಾರೆ. ಆದರೆ ಇಲ್ಲಿನ ಟ್ರಾಫಿಕ್ ಪೋಲಿಸರು ಮಾಡಿರುವ ಕೆಲಸಕ್ಕೆ ಸಾರ್ವಜನಿಕರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರದ ಸರ್ವೋದಯ ಸರ್ಕಲ್ ನಿಂದ ದೇಸಾಯಿ ಬ್ರಿಡ್ಜ್ ವರೆಗೂ ಇಂದುಸಂಜೆ ಅಪರಿಚಿತ ವಾಹನವೊಂದರ ಇಂಜಿನ್ ಆಯಿಲ್ ಲೀಕ್ ಆಗಿ ರಸ್ತೆಯ ತುಂಬೆಲ್ಲಾ ಸೋರಿತ್ತು.


ಪರಿಣಾಮ ಅದೇ ರಸ್ತೆಯಲ್ಲಿ ಓಡಾಟ ನಡೆಸುವ ವಾಹನ ಸವಾರರ ಆತಂಕಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲದೇ ಬೈಕ್‌’ಗಳು ಸ್ಕಿಡ್ ಆಗುವ ಸಂಭವ ಹೆಚ್ಚಾಗಿತ್ತು. ಇದನ್ನು ಗಮನಿಸಿದ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ತಕ್ಷಣವೇ ಎಚ್ಚತ್ತುಕೊಂಡು ಪಿಎಸ್ ಐ ಪುನಿತ್ ಕುಮಾರ್, ಎಎಸ್‌ಐ ಎಸ್.ಎನ್ ಭಜಂತ್ರಿ ನೇತೃತ್ವದಲ್ಲಿ ಕೂಡಲೇ ಸ್ವತಃ ಅವರೇ ರಸ್ತೆ ಮೇಲೆ ಮಣ್ಣು ತಂದು ಹಾಕುವ ಮೂಲಕ ಅದೆಷ್ಟೋ ಬೈಕ್‌ ಸವಾರರ ಪ್ರಾಣ ಉಳಿಸಿದ್ದಾರೆ.

ಇನ್ನೂ ತಮ್ಮ ಕೆಲಸದ ಒತ್ತಡದ ನಡುವೆಯೂ ಸಾರ್ವಜನಿಕರ ಪ್ರಾಣ ಹಾಗೂ ಯಾವುದೇ ದುರ್ಘಟನೆ ಆಗದಂತೆ ನೋಡಿಕೊಂಡಿರುವ ಸಂಚಾರಿ ಪೊಲೀಸರ ಕಾರ್ಯಕ್ಕೆ ಹುಬ್ಬಳ್ಳಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮಹತ್ತರ ಕಾರ್ಯದಲ್ಲಿ ಎಎಸ್‌.ಐ ಎಂ.ಜಿ.ವೊಟೆಗಳ್ಳಿ, ಬಿ.ಬಿ.ಮಾಯಣ್ಣವರ, ಸಿಬ್ಬಂದಿಗಳಾದ ನವೀನ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *