November 22, 2024

ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ಸಿನ ಕಾರ್ಯಕರ್ತನೊಬ್ಬ ಚುನಾವಣಾ ಆಯೋಗದ ನಿಯಮಗಳನ್ನು ಗಾಳಿಗೆ ತೂರಿದ ಬೆನ್ನಲ್ಲೇ ಈಗ ಬಿಜೆಪಿ ಕಾರ್ಯಕರ್ತನೊಬ್ಬ ಚುನಾವಣಾ ಆಯೋಗದ ನಿಯಮಗಳನ್ನ ಗಾಳಿಗೆ ತೂರಿದ್ದಾನೆ.

ಹೌದು..ಗೌಪ್ಯ ಮತದಾನವನ್ನ ಮಾಡಬೇಕೆಂದು ನಿಯಮವಿದ್ದರೂ ನಿಯಮಗಳನ್ನು ಉಲ್ಲಂಘನೆ ಮಾಡಿದ ಯುವಕ, ಬಿಜೆಪಿಗೆ ಮತ ಹಾಕಿರುವ ವಿಡಿಯೋ ವೈರಲ್ ಮಾಡಿದ್ದಾನೆ.

ಮತಗಟ್ಟೆಯಲ್ಲಿ ಮೊಬೈಲ್ ಉಪಯೋಗಕ್ಕೆ ಅವಕಾಶ ಇಲ್ಲ. ಆದ್ರೂ ಮೊಬೈಲ್‌ನ್ನ ಮತಗಟ್ಟೆಗೆ ತೆಗೆದುಕೊಂಡ ಹೋಗಿ ಮತದಾನವನ್ನ ಬಹಿರಂಗ ಮಾಡಿದ ಬಿಜೆಪಿಯ ಕಾರ್ಯಕರ್ತನ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಹುಬ್ಬಳ್ಳಿಯ ಮಂಜುನಾಥ ನಗರದ ನಿವಾಸಿ ಆದರ್ಶ ಪಾಟಿಲ್ ನಿಯಮವನ್ನ ಗಾಳಿಗೆ ತೂರಿದ ಯುವಕ ಎಂಬುವುದು ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *