September 7, 2024

ಹುಬ್ಬಳ್ಳಿ: ಕಾಂಗ್ರೆಸ್‌ ಅಭ್ಯರ್ಥಿ ವಿನೋದ್ ಅಸೂಟಿ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಬೇಕು. ಅವರೇ ಧಾರವಾಡ ಸಂಸದರಾಗಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ದೇವರ ಮೊರೆ ಹೋಗಿದ್ದಾರೆ.

ಇಂದು ರಾಜ್ಯದ 14 ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು, ಈ ನಡುವೆ ಅಸೂಟಿ ಬೆಂಬಲಿಗರು ಬೆಳಿಗ್ಗೆ ತಾಲೂಕಿನ ಕೊಟಗೊಂಡಹುಣಸಿ ಗ್ರಾಮದ ಹೊನ್ನತ್ತಮ್ಮ ಯಲ್ಲಮ್ಮನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಅಸೂಟಿ ಭಾವಚಿತ್ರವಿರುವ ಕರಪತ್ರವನ್ನು ದೇವಿಯ ಜಗಲಿಯ ಮೇಲಿಟ್ಟು, ವಿನೋದ್ ಅಸೂಟಿ ಜಯಶೀಲವಾಗಲೆಂದು ಪ್ರಾರ್ಥನೆ ಮಾಡಿದ್ದಾರೆ.ಇದೀಗ ಜಿಲ್ಲೆಯಾದ್ಯಂತ ತುರುಸಿನ ಮತದಾನ ನಡೆಯುತ್ತಿದ್ದು, ಅಸೂಟಿ ಪರ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹುರುಪಿನಿಂದ ಮತದಾರರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

ಅಸೂಟಿ ಯುವ ನಾಯಕನಾಗಿದ್ದು, ಜನರ ಸಮಸ್ಯೆಗೆ ಸ್ಪಂದಿಸುವ ಸೌ ಸ್ವಭಾವದ ವ್ಯಕ್ತಿ ಎಂಬ ಮಾತುಗಳು ಕ್ಷೇತ್ರದಾದ್ಯಂತ ಕೇಳಿಬರುತ್ತಿದ್ದು, ಇದಕ್ಕೆಲ್ಲ ಜೂನ್ 4 ರ ಫಲಿತಾಂಶದಿಂದ ಉತ್ತರ ಸಿಗಲಿದೆ.

Leave a Reply

Your email address will not be published. Required fields are marked *