September 7, 2024

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಅವರು, ಲೋಕಸಭಾ ವ್ಯಾಪ್ತಿಯ ಹುಬ್ಬಳ್ಳಿ ಪಶ್ಚಿಮ ಕ್ಷೇತ್ರದ ನವಲೂರಿನ 23 & 24 ವಾರ್ಡಗಳಲ್ಲಿ ಬೃಹತ್ ರೋಡ್ ಶೋ ಹಮ್ಮಿಕೊಂಡಿದ್ದರು. ಹಾಗೆಯೇ ತಡಸಿನಕೊಪ್ಪದಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು.

ನವಲೂರಿನ ಶ್ರೀ ಮಾಲತೇಶ ಮೈಲಾರಲಿಂಗೇಶ್ವರ ಮತ್ತು ಶ್ರೀ ಬೀರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

ನವಲೂರಿನ 23 & 24ನೇ ವಾರ್ಡಿನ ಪ್ರಮುಖ ಬೀದಿಗಳಲ್ಲಿ ರೋಡ ಶೋ ನಡೆಸಿದರು. ಸಾವಿರಾರು ಕಾರ್ಯಕರ್ತರೊಂದಿಗೆ ಪಕ್ಷದ ಜಯಘೋಷಗಳನ್ನು ಕೂಗುತ್ತಾ ಸಾಗಿದರು. ಕ್ರಮಸಂಖ್ಯೆ 2 ಕ್ಕೆ ಹೆಚ್ಚಿನ ಮತನೀಡಲು ಮನವಿ ಮಾಡಿದರು.

ತಡಸಿನಕೊಪ್ಪದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿದರು. ಸಾವಿರಾರು ಕಾರ್ಯಕರ್ತರೊಂದಿಗೆ ಪಕ್ಷದ ಜಯಘೋಷಗಳನ್ನು ಕೂಗುತ್ತಾ ಸಾಗಿದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ವಿನಂತಿ ಮಾಡಿದರು.

ಈ ಸಂದರ್ಭದಲ್ಲಿ ಇಸ್ಮಾಯಿಲ್ ತಮಟಗಾರ, ಮಯೂರ ಮೋರೆ, ಹಣಮಂತ ಕೋರವಾರ, ಬಸವರಾಜ ಮಲಕಾರಿ ಆತ್ಮಾನಂದ ತಳವಾರ ಮತ್ತು ತಡಸಿನಕೊಪ್ಪದ ಮುಖಂಡರು, ಕ್ಷೇತ್ರದ ಹಿರಿಯರು, ಮಹಿಳೆಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *