November 22, 2024

ಧಾರವಾಡ: ಬಿಜೆಪಿ ಸರಕಾರದ ಸಾಧನೆ ಕೇವಲ ಎರಡೇ ಎರಡು. ಒಂದು ದನದ ಮಾಂಸ ರಫ್ತಿನಲ್ಲಿ 2ನೇ ಸ್ಥಾನ. ಎರಡು ಮೋದಿ ಸ್ವಜಾಹೀರಾತಿಗಾಗಿ ಸರಕಾರದ 6500 ಕೋಟಿ ರೂಪಾಯಿ ವೆಚ್ಚ. ಹೀಗೆಂದು ವ್ಯಂಗ್ಯವಾಡಿದವರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌.

ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ್‌ ಅಸೂಟಿ ಅವರ ಪರ ಪ್ರಚಾರದ ಅಂಗವಾಗಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನವಲೂರಿನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷ ಮಂಗಳಸೂತ್ರ ಮಾರಿಸುವ ಅಥವಾ ಕೀಳುವ ಪಕ್ಷವಲ್ಲ ಅದು ಏನಿದ್ದರೂ ಬಿಜೆಪಿಗರ ಕೆಲಸ. 1947 ರಲ್ಲಿ 196 ಕೋಟಿ ರೂಪಾಯಿಯನ್ನು ದೇಶಕ್ಕಾಗಿ ದೇಣಿಗೆ ನೀಡಿದ್ದು ಕಾಂಗ್ರೆಸ್ ಪಕ್ಷದ ನೇತಾರ ಜವಾಹರಲಾಲ್ ನೆಹರು ಎಂದು ಲಾಡ್‌ ಅವರು ಗುಡುಗಿದರು.

ಧಾರವಾಡ ಸಂಸದರಾದ ಜೋಶಿ ಸಾಹೇಬರು ನಮ್ಮ ಪ್ರಶ್ನೆಗೆ ಇನ್ನೂ ಉತ್ತರಿಸಿಲ್ಲ. ಒಂದು ಬೆಲೆ ಏರಿಕೆ, ಎರಡು ರೈತರ ಸಾಲಮನ್ನಾ ಹಾಗೂ ಮೂರು ನಿರುದ್ಯೋಗ ಸಮಸ್ಯೆ. ಹೀಗೆ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಮೋದಿಯವರು ಮಾತನಾಡುವುದಿಲ್ಲ. ಜಿಲ್ಲೆ ಹಾಗೂ ರಾಜ್ಯದ ಜನರ ಸಮಸ್ಯೆಗಳಿಗೆ ಜೋಶಿಯವರು ಮಾತನಾಡುವುದಿಲ್ಲ. ಇಂತಹ ಪಕ್ಷಕ್ಕೆ ಬೆಂಬಲ ನೀಡದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಗೆಲ್ಲಿಸಬೇಕೆಂದು ಸಂತೋಷ ಲಾಡ್ ಮನವಿ ಮಾಡಿದರು.

ನದಿಗಳ ಜೋಡಣೆ ಬಗ್ಗೆ ಮಾತನಾಡುವ ಮೋದಿ, ಮಹದಾಯಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗುತ್ತಿಲ್ಲ ಮತ್ತು ಕರ್ನಾಟಕದ ರೈತರಿಗೆ ಬರ ಪರಿಹಾರ ನೀಡಲು ಮೀನಾಮೇಷ ಎಣಿಸುವ ಜೋಶಿಯವರನ್ನು ಸೋಲಿಸಿ ವಿನೋದ ಅಸೂಟಿ ಅವರ ಕ್ರಮಸಂಖ್ಯೆ 2 ಕ್ಕೆ ಹೆಚ್ಚಿನ ಮತ ನೀಡಿ ಬಹುಮತದಿಂದ ಗೆಲ್ಲಿಸಿ ಎಂದು ವಿನಂತಿಸಿಕೊಂಡರು.

 

ಈ ಸಂದರ್ಭದಲ್ಲಿ ಸಚಿವರಾದ ದಿನೇಶ್‌ ಗುಂಡೂರಾವ್‌, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಶ್ರೀ ಸಲೀಂ ಅಹಮದ್, ಅನೀಲಕುಮಾರ ಪಾಟೀಲ, ಅಲ್ತಾಫ ಹಳ್ಳೂರ, ಎ ಎಂ ಹಿಂಡಸಗೇರಿ, ಎ ಎಂ ಹಿಂಡಸಗೇರಿ, ದೀಪಕ ಚಿಂಚೋರೆ, ಇಸ್ಮಾಯಿಲ್ ತಮಟಗಾರ, ಬಸವರಾಜ ಗುರಿಕಾರ, ಇಕ್ಬಾಲ್, ಮೋಹನ ಲಿಂಬಿಕಾಯಿ, ಶರಣಪ್ಪ ಮತ್ತಿಕಟ್ಟಿ, ಎನ್ ಎಮ್ ಮೋರೆ, ಮಂಜುನಾಥ ಸುಣಗಾರ, ಸ್ವಾತಿ ಮಾಳಗಿ, ಸದಾನಂದ ಡಂಗನವರ, ನಾಗರಾಜ ಗೌರಿ, ಬಸವರಾಜ ಮಲಕಾರಿ, ಪಶ್ಚಿಮ ಕ್ಷೇತ್ರದ ಎಲ್ಲಾ ನಗರಸಭೆ ಸದಸ್ಯರು ಹಾಗೂ ಪರಾಜಿತ ಸದಸ್ಯರು, ಪಕ್ಷದ ಬ್ಲಾಕ್ ಅಧ್ಯಕ್ಷರುಗಳು, ಮಹಿಳಾ ಅಧ್ಯಕ್ಷರು ಹಾಗೂ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *