September 17, 2024

ಧಾರವಾಡ : ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು, ಇಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಅವರ ಪರವಾಗಿ ವಿನೂತನವಾಗಿ ಮತಯಾಚನೆ ಮಾಡಿದರು.

ಧಾರವಾಡದ ಸೂಪರ್‌ ಮಾರ್ಕೆಟ್‌, ಗಾಂಧಿ ಚೌಕ ಹಾಗೂ ಸುಭಾಷ್‌ ರೋಡ್‌ಗಳಲ್ಲಿ ಫೆಕ್ಸ್‌ಗಳನ್ನು ಹಿಡಿದು ಜನಜಾಗೃತಿ ಮೂಡಿಸಿ ಮತಯಾಚಿಸಿದರು.

ದೇಶದ ಜನರಿಗೆ ಕಾಂಗ್ರೆಸ್‌ ಸರ್ಕಾರವಿದ್ದಾಗ ಸಿಕ್ಕ ಕೊಡುಗೆಗಳು ಏನು? ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಕಳೆದ ಹತ್ತು ವರ್ಷಗಳಲ್ಲಿ ಏನು ಮಾಡಿದೆ. ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳಿಂದ ಏನೇನು ಪ್ರಯೋಜನವಾಗಿದೆ ಎಂಬ ಬಗ್ಗೆ ವಿವರಗಳನ್ನು ಒಳಗೊಂಡ ಫ್ಲೆಕ್ಸ್‌ಗಳನ್ನು ಹಿಡಿದು ಜನರ ಬಳಿಗೆ ಹೋಗಿ ಮಾಹಿತಿ ನೀಡಿ ಮತ ನೀಡಿ ಎಂದು ಮನವಿ ಮಾಡಿದರು.

2014 ರಿಂದ ಈವರೆಗೆ ಬೃಹತ್‌ ಕೈಗಾರಿಕೆ ಹಾಗೂ ಉದ್ಯಮಿಗಳ ರೂ.14.56 ಲಕ್ಷ ಕೋಟಿ ಸಾಲ ಮನ್ನಾ ಆಗಿದೆ. ಆದರೆ ರೈತರ ಸಾಲ ಮನ್ನಾ ಏಕಿಲ್ಲ ಎಂಬ ಪ್ರಶ್ನೆ ಒಳಗೊಂಡ ಪ್ಲೆಕ್ಸ್‌ಗಳು, ದೇಶವನ್ನು ಆಳಿದ ಹದಿನಾಲ್ಕು ಪ್ರಧಾನಿಗಳು ಮಾಡಿದ ಸಾಲವೆಷ್ಟು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಸಾಲ ಎಷ್ಟು ಎಂಬ ಮಾಹಿತಿ ಒಳಗೊಂಡ ಫ್ಲೆಕ್ಸ್‌ ಹೀಗೆ ಹಲವಾರು ವಿಷಯಗಳನ್ನು ಒಳಗೊಂಡ ಫ್ಲೆಕ್ಸ್‌ಗಳನ್ನು ಹಿಡಿದು ನೂರಾರು ಜನರು ಸಚಿವರೊಂದಿಗೆ ಪಾದಯಾತ್ರೆ ನಡೆಸಿದರು.

ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳಿಗೆ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಫ್ಲೆಕ್ಸ್‌ಗಳನ್ನು ತೋರಿಸಿ ವಿವರಿಸಿದರು.

ಸಚಿವರ ಈ ವಿನೂತನ ಮಾದರಿ ಪ್ರಚಾರ ಜನರನ್ನು ಸೆಳೆದಿದ್ದು ಅಲ್ಲದೆ, ಹಲವು ವಿಷಯಗಳ ಮಾಹಿತಿ ಒದಗಿಸಿದ್ದಕ್ಕೆ ಸಾರ್ವಜನಿಕರು ಧನ್ಯವಾದಗಳನ್ನು ತಿಳಿಸಿದರು.

Leave a Reply

Your email address will not be published. Required fields are marked *