ರವಾಡ ತಾಲೂಕಿನ ಮುಗದ ಗ್ರಾಮದ ಹಿಂದೂಗಳ ಕಲ್ಮೇಶ್ವರ ದೇವರ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರಿಂದ ಆರೇಂಜ್ ಜ್ಯೂಸ್ ವಿತರಣೆ ಮಾಡಲಾಗುತ್ತಿದ್ದು, ಈ ಮೂಲಕ ಮುಗದ ಗ್ರಾಮ ಭಾವೈಕ್ಯತೆಗೆ ಸಾಕ್ಷಿಯಾಗಿದೆ.ಮುಗದ ಗ್ರಾಮದ ಕಲ್ಮೇಶ್ವರ ದೇವರ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರಿಂದ ಆರೇಂಜ್ ಜ್ಯೂಸ್ ವಿತರಣೆ ಮಾಡಲಾಗುತ್ತಿದೆ. 40 ವರ್ಷಗಳ ಬಳಿಕ ಜಾತ್ರೆ ನಡೆಯುತ್ತಿದ್ದು, ರಥೋತ್ಸವದ ಮೆರವಣಿಗೆಯಲ್ಲಿ ಆರೇಂಜ್ ಜ್ಯೂಸ್ ವಿತರಣೆ ಮಾಡುವ ಮೂಲಕ ಮುಗದಗ್ರಾಮ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಹಿಂದೂ ಮುಸ್ಲಿಂ ಗಲಾಟೆ ಜೋರಾಗಿದ್ದು, ಹಿಂದೂಗಳ ಜಾತ್ರೆಯಲ್ಲಿ ಮುಸ್ಲಿಂರಿಗೆ ವ್ಯಾಪಾರ ನಿಷೇದ, ಹಿಜಾಬ್ ಗಲಾಟೆ ಇಂತಹ ಘಟನೆಗಳ ಮಧ್ಯೆ ಇದೀಗ ಧಾರವಾಡ ತಾಲೂಕು ಭಾವೈಕ್ಯತೆಗೆ ಸಾಕ್ಷಿಯಾಗಿದೆ.