August 19, 2025
16

ಬೆಳಗಾವಿ ನಗರದ ಕಿಲ್ಲಾ ಕೆರೆಯ ಆವರಣದಲ್ಲಿರುವ ಅತೀ ಎತ್ತರದ ರಾಷ್ಟ್ರ ಧ್ವಜ ನಿರಂತರವಾಗಿ ಹಾರಾಡಬೇಕೆಂದು ಪಾಲಿಕೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉತ್ತರ ಮತಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಹೇಳಿದರು.ಮಂಗಳವಾರ ನಗರದ ಕೋಟೆ ಕೆರೆಯಲ್ಲಿರುವ ರಾಷ್ಟ್ರ ಧ್ವಜವನ್ನು ನಿರಂತರವಾಗಿ ಹಾರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಬೆಳಗಾವಿ ನಗರದಲ್ಲಿ ಕಿಲ್ಲಾ ಕೋಟೆಯ ಕೆರೆಯಲ್ಲಿ ರಾಷ್ಟ್ರ ಧ್ವಜ ಪ್ರತಿ ದಿನ ಹಾರಾಡಬೇಕೆಂದು ಪ್ರಣಾಳಿಕೆಯಲ್ಲಿತ್ತು. ಮೊದಲು ರಾಷ್ಟ್ರ ಧ್ವಜ ಬಗ್ಗೆ, ಸ್ವಾಭಿಮಾನ, ಗೌರವ, ಹೃದಯದಿಂದ ಬರಬೇಕು ಹಾಗಾಗಬೇಕಾದರೇ ಇಲ್ಲಿ ರಾಷ್ಟ್ರ ಧ್ವಜ ಹಾರಾಡಬೇಕು ಎಂದರು.

ಪ್ರತಿಯೊಬ್ಬರೂ ದೇಶದ ಧ್ವಜದ ಬಗ್ಗೆ ಗೌರವ ನೀಡಬೇಕು. ಕೇವಲ ಮಾತಿನಲ್ಲಿ ದೇಶದ ಪರವಾಗಿ ಕೆಲಸ ಮಾಡುವುದು ಬೇಡ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಎಲ್ಲರೂ ತಲೆ ಎತ್ತಿ ಧ್ವಜವನ್ನು ನೋಡುವಂತಾಗಬೇಕು ಎಂದರು. ಮುಖ್ಯಮಂತ್ರಿ ಮಾಡುವುದರಲ್ಲಿ ಹೈಕಮಾಂಡ್ ತಿರ್ಮಾನ ಕೈಗೊಳ್ಳುತ್ತದೆ. ಅಲ್ಲದೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಡಿಸಿಎಂ ಆಗಬೇಕು ಎಂದು ಈ ಹಿಂದೆ ಭಾಷಣದಲ್ಲಿ ಹೇಳಿದ್ದೆ. ಅವರು ಪಕ್ಷ ಸಂಘಟನೆಯಲ್ಲಿ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಈಗಲೂ ನನ್ನ ವೈಯಕ್ತಿಕ ಆಸೆ ಇದೆ. ಅವರು ಡಿಸಿಎಂ ಆಗಬೇಕು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

Leave a Reply

Your email address will not be published. Required fields are marked *