ಡಿಕೆ ಶಿವಕುಮಾರ್ ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ನಂತರ ಸುದ್ದಿಗಾರರ ಜೊತೆ ಮಾತನಾಡಿದರು. ಭಜರಂಗದಳ ಬ್ಯಾನ್ ಕುರಿತಾದ ಡ್ಯಾಮೇಜ್ ಕಂಟ್ರೋಲ್ ಗೆ ಡಿಕೆಶಿ ಮುಂದಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ವಿಶೇಷ ಮಂಡಳಿ ರಚನೆ ಮಾಡುತ್ತೇವೆ, ಪ್ರತಿ ತಾಲೂಕಿನಲ್ಲೂ ಆಂಜನೇಯನ ಹೆಸರಿನಲ್ಲಿ ಪ್ರತ್ಯೇಕ ಕಾರ್ಯಕ್ರಮ ನಡೆಸುತ್ತೇವೆ ಯುವಕರಲ್ಲಿ ಆಂಜನೇಯ ಸಿದ್ಧಾಂತ ಬೆಳೆಸಲು ಪ್ರತ್ಯೇಕ ಕಾರ್ಯಕ್ರಮ ರೂಪಿಸುತ್ತೇವೆ ಎಂದು ಡಿಕೆಶಿ ಹೇಳಿದರು.
ಆಂಜನೇಯನ ಹೆಸರು ಇಟ್ಕೊಂಡು ಇರೋರು ಅಂಜನೇಯ ಆಗ್ತಾರ? ಅಂತ ಡಿ ಕೆ ಶಿವಕುಮಾರ್ ಅವರು ಪ್ರಶ್ನೆ ಮಾಡಿದ್ದಾರೆ. ದೇವರ ಹೆಸರನ್ನು ಇಟ್ಟುಕೊಂಡು ಜನರಲ್ಲಿ ಭಯದ ವಾತವಾರಣವನ್ನು ಉಂಟು ಮಾಡುತ್ತಿದ್ದಾರೆ . ನಾವು ಆಂಜನೇಯವರನ್ನು ಪೂಜೆ ಮಾಡುತ್ತೇವೆ, ಆಂಜನೇಯ ಬೇರೆ, ಭಜರಂಗ ದಳ ಬೇರೆ ಎರಡಕ್ಕೂ ಬೇರೆ ವ್ಯತ್ಯಾಸವಿದೆ ಎಂದು ಡಿಕೆಶಿ ತಿಳಿಸಿದರು.ಇನ್ನೂ ಕಾಂಗ್ರೆಸ್ ಪ್ರಣಾಳಿಕೆ ಸುಟ್ಟು ಕೆ.ಎಸ್ ಈಶ್ವರಪ್ಪನವರ ವಿರುದ್ದ ವ್ಯಂಗ್ಯವಾಡಿದ ಡಿಕೆಶಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರನ್ನೇ ಅವರು ಸುಟ್ಟುಕೊಳ್ಳಲ್ಲಿ, ಅವರ ಕಾರ್ಯಕರ್ತರನ್ನು ಸಾಯಿಸಿದ್ದಕ್ಕೆ ಅವರಿಗೆ ಟಿಕೆಟ್ ಸಿಗಲಿಲ್ಲ ಎಂದು ಸುದ್ದಿಗಾರರ ಮುಂದೆ ಹೇಳಿದರು.