October 13, 2025
28

ರಾಜ್ಯದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಚಾರ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ಈ ಸಂಬಂಧ ಬೆಂಗಳೂರಿನ ಶಿವಾನಂದ ವೃತ್ತದ ಬಳಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಯೋಗಿ ಆದಿತ್ಯನಾಥ್ ಅವರು ರಾಜ್ಯದ ಬಿಜೆಪಿಯ ಪರವಾಗಿ ಚುನಾವಣಾ ಪ್ರಚಾರ ಮಾಡಲು ಬಂದಿದ್ದಾರೆ. ರಾಜ್ಯದ ಮಂಡ್ಯ ಮುಂತಾದ ಕಡೆ ಉತ್ತರ ಪ್ರದೇಶದ ಮಾದರಿಯ ಬಗ್ಗೆ ಮಾತನಾಡಿದ್ದಾರೆ.

ಯುಪಿ ಮಾದರಿ ಎಂದರೆ ಏನು ಎಂದು ಇಡೀ ಜಗತ್ತಿಗೆ ಗೊತ್ತಾಗಿದೆ. ಆದರೂ ಅದರ ಬಗ್ಗೆ ಕರ್ನಾಟಕದಲ್ಲೂ ಪ್ರಸ್ತಾಪಿಸುವುದು ಹಾಸ್ಯಾಸ್ಪದ ವಾದ ಸಂಗತಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕೇಂದ್ರ ಸರ್ಕಾರದ ದಾಖಲೆಗಳ ಪ್ರಕಾರ ಉತ್ತರಪ್ರದೇಶದಲ್ಲಿ 6 ವರ್ಷದ ಒಳಗಿನ ಮಕ್ಕಳ ಅನಿಮಿಯಾ ಪ್ರಮಾಣ ಶೇ. 66.4 ರಷ್ಟಿದೆ. ಇದು 2016 ರಲ್ಲಿ ಶೇ.63.2 ರಷ್ಟಿತ್ತು. ಶೇ.3.2 ರಷ್ಟು ಅಪೌಷ್ಟಿಕತೆಯನ್ನು ಹೆಚ್ಚಿಸಿ ಮಕ್ಕಳನ್ನು, ರೋಗಗ್ರಸ್ತ ಮಾಡಿದ್ದು ಯೋಗಿ ಆದಿತ್ಯ ನಾಥ್ ಅವರ ಸಾಧನೆನಾ? 2016ರಲ್ಲಿ ಉತ್ತರ ಪ್ರದೇಶದ ಮಹಿಳೆಯರ ಸರಾಸರಿ ಜೀವಿತಾವಧಿ 68.5 ರಷ್ಟಿತ್ತು. 2019 ರಲ್ಲಿ ಅದು ಶೇ.66.2 ಕ್ಕೆ ಕುಸಿದಿದೆ. ಎಲ್ಲ ರಾಜ್ಯಗಳ ಜನರ ಜೀವಿತಾವಧಿ ಹೆಚ್ಚುತ್ತಿದ್ದರೆ ಉತ್ತರ ಪ್ರದೇಶದಲ್ಲಿ ಕುಸಿಯುತ್ತಿದೆ. ಇದೇನಾ ಆದಿತ್ಯನಾಥ್ ಮಾದರಿ? ಎಂದು ಹತ್ತು ಹಲವು ಪ್ರಶ್ನೆ ಕೇಳಿ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.

Leave a Reply

Your email address will not be published. Required fields are marked *