October 13, 2025
26

ಕರ್ನಾಟಕ ವಿಧಾನಸಭಾ ಚುನಾವಣ ದಿನದಿಂದ ದಿನಕ್ಕೆ ರಂಗೇರಿದೆ. ಬಿಜೆಪಿಯ ಅಥಿರಥ ಮಹಾನಾಯಕರು ಇದೀಗ ಕರ್ನಾಟಕದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಡ್ಯಕ್ಕೆ ಆಗಮಿಸಿದ್ದಾರೆ. ಜೆಡಿಎಸ್ ಭದ್ರಕೋಟೆಯಲ್ಲಿ ಯೋಗಿ ಆದಿತ್ಯನಾಥ್ ಭರ್ಜರಿ ರೋಡ್ ಶೋ ನಡೆಸುತ್ತಿದ್ದಾರೆ .

ಯೋಗಿ ಆದಿತ್ಯನಾಥ್‌ಗೆ ಸಂಸದೆ ಸುಮಲತಾ, ಮಂಡ್ಯ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್, ಶ್ರೀರಂಗಪಟ್ಟಣ ಅಭ್ಯರ್ಥಿ ಹಿಂಡುವಾಳ ಸಚ್ಚಿದಾನಂದ ಸಾಥ್ ನೀಡಿದ್ದಾರೆ. ಯೋಗಿ ರೋಡ್ ಶೋಗೆ ಜನಸಾಗರವೇ ಹರಿದು ಬಂದಿದೆ. ಯೋಗಿ ಯೋಗಿ ಎಂದು ಜಯಘೋಷಗಳು ಮೊಳಗಿದೆ.

ಹೆಲಿಕಾಪ್ಟರ್ ಮೂಲಕ ಮಂಡ್ಯದ ಸಂಜಯ್ ವೃತ್ತಕ್ಕೆ ಆಗಮಿಸಿದ ಯೋಗಿ ಆದಿತ್ಯನಾಥ್‌ಗೆ ಭರ್ಜರಿ ಸ್ವಾಗತ ಕೋರಲಾಯಿತು. ಯೋಗಿ ಜೊತೆಗೆ ಹೆಲಿಕಾಪ್ಟರ್ ಮೂಲಕ ಸಂಸದ ಪ್ರತಾಪ್ ಸಿಂಹ, ಸಚಿವ ಅಶ್ವತ್ಥ್ ನಾರಾಯಣ್ ಆಗಮಿಸಿದ್ದರು. ಮಂಗಳವಾದ್ಯ, ವೇದಘೋಷಗಳೊಂದಿಗೆ ಪೂರ್ಣಕುಂಭ ಸ್ವಾಗತ ಕೋರಲಾಗಿದೆ. ಬಳಿ ವೇದ ಮಂತ್ರ ಪಠಿಸುತ್ತಿದ್ದ ಅರ್ಚಕ ವೃಂದದ ಬಳಿ ತೆರಳಿ ಕೈಮುಗಿದು ನಮಸ್ಕರಿಸಿದ್ದಾರೆ. ಇದಾದ ಬಳಿಕ ತೆರೆದ ವಾಹನ ಏರಿ ರೋಡ್ ಶೋ ಆರಂಭಿಸಿದರು.

Leave a Reply

Your email address will not be published. Required fields are marked *