September 20, 2024

ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಯುಕ್ತ ಎರಡು ದಿನದಿಂದ ಇಲ್ಲಿಯೇ ಬಿಡು ಬಿಟ್ಟಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕರ್ನಾಟಕದ ವಿವಿಧಡೆ ಅದರಲ್ಲೂ ಉತ್ತರ ಕರ್ನಾಟಕದ ಹಲವು ಕಡೆ ಭೇಟಿ ನೀಡಿ ಈ ಭಾಗದ ಜನರ ಸಮಸ್ಯೆಗಳು ಹಾಗೂ ವಿಶೇಷವಾಗಿ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ರೈತರೊಂದಿಗೆ ಸಂವಾದ ನಡೆಸಿದರು.

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಹೊರವಲಯದಲ್ಲಿರುವ ರಾಠಿ ಫಾರ್ಮ್ ಹೌಸ್ ನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗಿಯಾಗಿ ಮಾತನಾಡಿದರು.

ರೈತರ ಸಮಸ್ಯೆಗಳನ್ನು ಆಲಿಸಿದ ಅವರು ರೈತರ ಬೆಳೆಗಳಿಗೆ ಹೆಚ್ಚಿನ ಬೆಲೆ ಸಿಗಬೇಕಾದ ಅವಶ್ಯಕತೆ ಇದೆ ನಮ್ಮ ಸರ್ಕಾರ ಬಂದರೆ ರೈತರೊಂದಿಗೆ ಚರ್ಚಿಸಿ ಬೆಲೆಯನ್ನು ದ್ವಿಗುಣ ಮಾಡಲಾಗುವುದು ಸಣ್ಣ ಉದ್ಯಮದಾರರಿಗೆ ಹೆಚ್ಚಿನ ಬೆಲೆ ಸಿಗುವಂತೆ ಮಾಡಲಾಗುವುದು, ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲೆಂಡರ್, ಬೆಲೆ ಹೆಚ್ಚಾಗುತ್ತಿದೆ ಹಾಗೂ ರೈತರ ಕೃಷಿ ಉಪಕರಣಗಳ ವಸ್ತುಗಳ ಮೇಲೆ ಜಿಎಸ್‌ಟಿ ಹಾಕಲಾಗುತ್ತಿದೆ ಇದರಿಂದ ರೈತ ವರ್ಗಕ್ಕೆ ಬಹಳಷ್ಟು ತೊಂದರೆ ಆಗಿದೆ, ನಾವು ರೈತರ ಸುರಕ್ಷತೆ ಬಗ್ಗೆ ಯೋಚಿಸಬೇಕಾಗಿದೆ ಅವಶ್ಯಕತೆಗನುಗುಣವಾಗಿ ರೈತರಿಗೆ ಸ್ಪಂದಿಸಬೇಕಾಗಿದೆ, ಬಿಜೆಪಿ ಸರ್ಕಾರ 5 ರೀತಿಯ ಬೇರೆ ಬೇರೆ ಜಿಎಸ್‌ಟಿಯನ್ನು ಹಾಕುತ್ತಿದೆ ಇದರಿಂದ ಸಾಮಾನ್ಯ ವರ್ಗಕ್ಕೆ ತೊಂದರೆ ಹೊರತು ಶ್ರೀಮಂತರಿಗೆ ಅಲ್ಲ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಈ 5 ರೀತಿಯ ಬೇರೆ ಬೇರೆ ಜಿಎಸ್‌ಟಿಯನ್ನು ಬದಲಾವಣೆ ಮಾಡಲಾಗುವುದೆಂದು ಹೇಳಿದರು. ಹಿಂದಿಯಲ್ಲಿ ಮಾತನಾಡಿದ ರಾಹುಲ ಗಾಧಿ ಕನ್ನಡದಲ್ಲಿ ಅನುವಾದ ಮಾಡಿದ ರಾಮದುರ್ಗ ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷ ಇಸ್ಮಾಯಿಲ್ ಹವಾಲದಾರ.ಈ ಸಂಧರ್ಭದಲ್ಲಿ ಮಾಜಿ ಸಂಸದ ವಿ ಎಸ್ ಉಗ್ರಪ್ಪ,ರಣದೀಪಸಿಂಗ ಸುರಜೀವಾಲಾ, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *