ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ವೇಳೆ ಇಲ್ಲದ ಡಾಕ್ಟರ್ಸ, ಡಾಕ್ಟರ್ ನಂಬರ್ ಸಹ ತಪ್ಪು ಬರೆಯುವ ಮೂಲಕ ಜನರನ್ನು ಕಾಯುವಂತೆ ಮಾಡುತ್ತಿರುವ ಬೆಳಗಾವಿ ಸರ್ಕಾರಿ ಜಿಲ್ಲಾ ಆಸ್ಪತ್ರೆ. ಸಂಬಂದಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ, ಜನರ ಆಕ್ರೋಶ..ಬೆಳಗಾವಿಯ ಸರ್ಕಾರಿ ಜಿಲ್ಲಾ ಆಸ್ಪತ್ರೆ ಕ್ಷ-ಕಿರಣ, ಸ್ಕ್ಯಾನಿಂಗ್ ಕೇಂದ್ರದಲ್ಲಿ ಜನರು ಪರದಾಡುವಂತಾಗಿದೆ. ಸರಿಯಾದ ಸಮಯಕ್ಕೆ ಸಿಬ್ಬಂದಿಗಳಿಲ್ಲ, ಸೂಚನಾ ಫಲಕದಲ್ಲಿ ಡಾಕ್ಟರ್ ನಂಬರ್ ಸಹ ತಪ್ಪು.
9 ಅಂಕಿ ಪೋನ್ ನಂಬರ್ ಮತ್ತು ತಪ್ಪು ಪೋನ್ ನಂಬರ್ ಬರೆಯುವ ಮೂಲಕ ಜನರನ್ನು ಕಾಯುವಂತೆ ಮಾಡುತ್ತಿದ್ದಾರೆ. ಜನರು ಅಲ್ಲಿರುವ ಸಿಬ್ಬಂದಿಯನ್ಮು ಕೇಳಲು ಹೊದರೆ, ಅವರು ನಮಗೆನು ಗೋತ್ತಿಲ್ಲ ನಾನು ಟೆಕ್ನಿಕಲ್ ಸಿಬ್ಬಂದಿಗಳು ಮೇಲಾಧಿಕಾರಿಗಳನ್ನು ಕೇಳಿ ಎಂದು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಂತರ ಬಂದು ಸೂಚನಾ ಫಲಕದಲ್ಲಿರುವ ನಂಬರ್ ಸರಿ ಮಾಡುತ್ತಾರೆ.
ಬೆಳಗಾವಿಯ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಜಿಲ್ಲೆಯ ಎಲ್ಲ ಜನರು ಬರುತ್ತಾರೆ, ಆದರೆ ಅಲ್ಲಿಯ ಸಿಬ್ಬಂದಿಗಳು ಸರಿಯಾದ ಮಾಹಿತಿ ನೀಡದೇ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ.