September 19, 2024

ಬೆಳಗಾವಿ ಜಿಲ್ಲೆ ರಾಮದುರ್ಗ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಪಕ್ಷದ ಹೈಕಮಾಂಡ್ ಟಿಕೆಟ್ ತಪ್ಪಿಸಿ ಶಾಕ್ ನೀಡಿದೆ. ಟಿಕೆಟ್ ಕೈತಪ್ಪಿದ್ದಕ್ಕೆ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಬಂಡಾಯ ಭುಗಿಲೆದ್ದಿದೆ,

ತಾಲೂಕಿನ ಬಿಜೆಪಿ ಟಿಕೆಟ್ ಪ್ರಮುಖ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರು ಒಂದೆಡೆ ಸೇರಿ ಬಿಜೆಪಿ ಸರ್ಕಾರದ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ಕ್ಷೇತ್ರದ ಟಿಕೆಟ್ ಚಿಕ್ಕರೇವಣ್ಣ ಅವರಿಗೆ ನೀಡಿದೆ.ಬಿಜೆಪಿ ಪಕ್ಷ ಮೂಲ ಬಿಜೆಪಿಗರಿಗೆ ಟಿಕೆಟ್ ವಂಚಿಸಿ ಅನ್ಯಾಯ ಮಾಡಿದೆ, ತಾಲೂಕಿನ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿದ್ದರೆ ನಾವು ಒಮ್ಮತದಿಂದ ಬೆಂಬಲ ಸೂಚಿಸುತ್ತಿದ್ದೇವು ಆದರೆ ಪಕ್ಷಕ್ಕೆ ನಿನ್ನೆ ಮೊನ್ನೆ ಬಂದವರಿಗೆ ಟಿಕೆಟ್ ನೀಡಿರುವುದು ಸಹಿಸಲಾಗದು.ಕೂಡಲೇ ಟಿಕೆಟ್ ಬದಲಾವಣೆಯಾಗಬೇಕು ಇರದಿದ್ದರೆ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಮಲ್ಲಣ್ಣ ಯಾದವಾಡ ಹಾಗೂ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಮದುರ್ಗ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಹಲವಾರು ಜನ ಇದ್ದು ಅದರಲ್ಲಿ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ, ರಮೇಶ ದೇಶಪಾಂಡೆ, ಪಿ. ಎಫ್. ಪಾಟೀಲ, ಡಾ. ಕೆ.ವ್ಹಿ. ಪಾಟೀಲ, ರೇಖಾ ಚಿನ್ನಾಕಟ್ಟಿ, ವಿಜಯ ಗುಡದಾರಿ, ರೇಣಪ್ಪ ಸೋಮಗೊಂಡ, ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಸಹೋದರ ಮಲ್ಲಣ್ಣ ಯಾದವಾಡ ಸೇರಿದಂತೆ ಹಲವಾರು ಜನ ರಾಮದುರ್ಗ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದರು ಜೊತೆಗೆ ತಮ್ಮಲ್ಲಿಯೇ ಟಿಕೆಟ್ ದೊರೆಯುವುದೆಂದು ನಿರೀಕ್ಷೆಯಲ್ಲಿದ್ದರೂ,ಆದರೆ ಬಿಜೆಪಿ ಹೈಕಮಾಂಡ್ ಇವರನ್ನು ಲೆಕ್ಕಿಸದೆ ನಿನ್ನೆ ಮೊನ್ನೆ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮತ್ತು ಸ್ಥಳೀಯರಲ್ಲದ ಚಿಕ್ಕ ರೇವಣ್ಣ ಅವರಿಗೆ ಟಿಕೆಟ್ ನೀಡಿರುವುದು ಸ್ಥಳೀಯ ಕಾರ್ಯಕರ್ತರ ಹಾಗೂ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಮೊದಲು ಹಾಲಿ ಶಾಸಕ ಮಹದೇವಪ್ಪ ಯಾದವಾಡ ಅವರ ಮನೆ ಮುಂದೆ ಜಮಾಯಿಸಿದ ಬೆಂಬಲಿಗರು ಹಾಗೂ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು ನಂತರ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಜಮಾಯಿಸಿ ಪಕ್ಷದ ನಡೆ ವಿರುದ್ಧ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.

Leave a Reply

Your email address will not be published. Required fields are marked *