September 17, 2024

ಲಿಂಗಾಯತ ಸಮಾಜದ ಭೂಮಿಯ ಅಭಿವೃದ್ಧಿ ಮಾಡುವ ಕುರಿತು ಅನುದಾನ ದುರ್ಬಳಕೆಯಾಗಿರುವ ಶಂಕೆ ವ್ಯಕ್ತವಾಗಿದ್ದು ವಿವಿಧ ಲಿಂಗಾಯತ ಸಮುದಾಯದ ಸಂಘಟನೆಗಳು ಸೋಮವಾರ ಬೆಳಗಾವಿ ಮಹಾಪಾಲಿಕೆಯ ಆಯುಕ್ತರ ಜೊತೆಗೆ ಚರ್ಚೆ ನಡೆಸಿದರು.

ಲಿಂಗಾಯತ ಮುಖಂಡ ರಾಜಕುಮಾರ ಟೋಪಣ್ಣವರ ಮಾತನಾಡಿ, ಲಿಂಗಾಯತ ರುದ್ರಭೂಮಿಗೆ ಬಿಡುಗಡೆಯಾದ ಅನುದಾನವನ್ನು ಲಿಂಗಾಯತ ಸಮಾಜದ ರುದ್ರಭೂಮಿಗೆ ಅಭಿವೃದ್ಧಿ ಪಡಿಸಿ ಬೇರೆ ಕಡೆ ಅನುದಾನವನ್ನು ಬಳಕೆ ಮಾಡಬೇಡಿ ಎಂದರು.
2022 ರಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಇಲ್ಲಿ ಯಾವುದೇ ಮೂಲಭೂತ ಸೌಲಭ್ಯ ಇಲ್ಲ. ನೀತಿ ಸಂಹಿತೆ ನೋಡಿ ಮೃತಪಡುವುದಿಲ್ಲ. ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಲಿಂಗಾಯತ ಮುಖಂಡ ಸುಜೀತ ಮುಳಗುಂದ ಮಾತನಾಡಿ, ಲಿಂಗಾಯತ ಸಮುದಾಯದ ರುದ್ರಭೂಮಿಯ ಅನುದಾನವನ್ನು ಬೇರೆ ಕಡೆ ಬಳಕೆ ಮಾಡಿದ್ದಾರೆ ಎನ್ನುವ ಅನುಮಾನ ಇತ್ತು. ಅದನ್ನು ತಿಳಿದುಕೊಳ್ಳಲು ಪಾಲಿಕೆ ಆಯುಕ್ತರ ಜೊತೆಗೆ ಚರ್ಚೆ ಮಾಡಲಾಯಿತು ಎಂದರು.

ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಮಾತನಾಡಿ, ಸದಾಶಿವ ನಗರದ ಸ್ಮಶಾನದ ಅಭಿವೃದ್ಧಿಗೆ ಮಾಡಿರುವ ವಿಚಾರಕ್ಕೆ ಒಂದು ರೂ. ಸಂಬಳ ವಾಗಿಲ್ಲ. ಆದರೆ ಅಧಿಕಾರಿಗಳು ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವ ಆರೋಪ ಮಾಡಿರುವುದು ಸರಿಯಲ್ಲ. ಇದರಲ್ಲಿ ಭ್ರಷ್ಟಾಚಾರ, ಹಣ ಗುಳಂ ಮಾಡಿದ್ದಾರೆ ಎನ್ನುವುದು ಸರಿಯಲ್ಲ ಎಂದು ವಿವಿಧ ಲಿಂಗಾಯತ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟರು. ಜೊತೆಗೆ ಟೆಂಡರ್ ಗೆ ಸಂಬಂದಪಟ್ಟ ಎಲ್ಲ ರೀತಿಯ ಮಾಹಿತಿ ಪೈಲ್ ನ್ನು ನೀಡುವುದಾಗಿ ತಮ್ಮ ಸ್ಪಷ್ಟನೇ ನೀಡಿದರು.

ಪಾಲಿಕೆ ಸದಸ್ಯ ಶಂಕರ ಪಾಟೀಲ, ಸಂಜಯ ಭಾವಿ, ರವೀಂದ್ರ ಬೆಲ್ಲದ, ಬಸವರಾಜ ರೊಟ್ಟಿ, ಅಶೋಕ ಮಳಗಲಿ, ಸುನೀತಾ ದೇಸಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *