ಬೆಳಗಾವಿ ಎಕ್ಸ್ಪ್ರೆಸ್ ವರದಿ : ಯಮಕನಮರ್ಡಿ – ಮಕ್ಕಳ ಭವಿಷ್ಯಕ್ಕೆ ಬೆಲೆನೇ ಇಲ್ಲದಂತಾಗಿದೆ. ಪರೀಕ್ಷೆಗಳು ಸಮೀಪಿಸುತಿದ್ದಂತೆ ಇಲ್ಲೊಂದು ಸಮಸ್ಯೆ ಎದುರಾಗಿದ್ದು, ಇದು ಸರ್ಕಾರ ತಪ್ಪೋ ಇಲ್ಲಾ ಸ್ಕೂಲ್ ಬಿಲ್ಡಿಂಗ್ ಒನರ್ ತಪ್ಪೋ. ಯಾರ ತಪ್ಪೆಂದು ತಿಳಿಯದಾಗಿದೆ ಆದರೇ ಶಿಕ್ಷೆ ಮಾತ್ರ ಸ್ಕೂಲ್ ವಿದ್ಯಾರ್ಥಿಗಳಿಗಾಗಿದೆ ಇದ್ಯಾವ ನ್ಯಾಯ? 10 ನೇ ತರಗತಿ ವಿದ್ಯಾರ್ಥಿಗಳ ಸರಣಿ ಪರೀಕ್ಷೆ ಗಳು ನಡೆಯುತ್ತಿರುವಾಗ ಶಾಲಾ ಕಟ್ಟಡಕ್ಕೆ ಬೀಗ ಜಡದಿರುವುದರಿಂದ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ.
ಹುಕ್ಕೇರಿ ತಾಲೂಕಿನ ಯಮಕನಮರಡಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಸರಕಾರಿ ಮೌಲಾನಾ ಅಜಾದ್ ಮಾದರಿ ಶಾಲೆ ಗುತ್ತಿಗೆ ಆಧಾರದ ಮೇಲೆ ಸುಮಾರು 3 ವರ್ಷಗಳಿಂದ ಖಾಸಗಿ ಕಟ್ಟಡದಲ್ಲಿ ಸ್ಕೂಲ್ ನಡೆಯುತ್ತಿದ್ದು, ಡಿಸೆಂಬರ್ 2022 ಕ್ಕೆ ಸರ್ಕಾರದೊಂದಿಗೆ ಕಟ್ಟಡ ಮಾಲಿಕ ಮಾಡಿಕೊಂಡ ಅಗ್ರಿಮೆಂಟ್ ಮುಗಿದಿದೆ. ಇನ್ನು ಮುಂದಿನ ಅಗ್ರಿಮೆಂಟ್ ಮಾಡಿಕೊಳ್ಳಲು ಕಟ್ಟಡ ಮಾಲಿಕ ತಯಾರ ಇಲ್ಲ. ಕಟ್ಟಡ ಮಾಲೀಕ ನಮ್ಮ ಸುದ್ದಿ ವಾಹಿನಿ ಮೂಲಕ ಮಾತನಾಡಿ ತಿಳಿಸಿದ ಹಾಗೆ ಸುಮಾರು ಮೂರನಾಲ್ಕು ತಿಂಗಳಿನಿಂದ ಸ್ಕೂಲ್ ಮುಖ್ಯೋಪಾಧ್ಯಾಯರಿಗೆ ಸ್ಕೂಲ್ ಖಾಲಿ ಮಾಡಲು ಹೇಳಿದ್ದುರೂ ಅವರು ಈ ವಿಷಯದಲ್ಲಿ ನಿರ್ಲಕ್ಷತೆ ವಹಿಸುತ್ತಿರುವುದಾಗಿ ಆರೋಪ ಮಾಡಿದ್ದಾರೆ. ದಿನಾಂಕ 9 ಫೆಬ್ರುವರಿ 2023 ಗುರುವಾರ ಕಟ್ಟಡ ಮಾಲೀಕ ಸ್ಕೂಲಿಗೆ ಬೀಗ ಜಡದಿದ್ದಾರೆ.
ಶಾಲಾ ಕಟ್ಟಡಕ್ಕಾಗಿ ಜಾಮೀನು ಮಂಜೂರಾತಿಯ ಬಗ್ಗೆ ಹಲವು ಬಾರಿ ತಹಶಿಲ್ದಾರರಿಗೆ ಮನವಿ ಮಾಡಿದ್ದು, ಅವರು ಬಾಯಿ ಮಾತಿಗೆ ಬರವಸೆ ನೀಡಿದ್ದಾರೆ. ಇಲ್ಲಿಯವರೆಗೆ ಶಾಲಾ ಕಟ್ಟಡ ಸ್ಥಳ ಮಂಜೂರಾತಿ ಮಾಡದೇ ಇರುವುದು ಮಕ್ಕಳ ಭವಿಷ್ಯಕ್ಕೆ ಮುಳ್ಳಾಗಿದೆ.
ಉನ್ನತ ಅಧಿಕಾರಿಗಳು ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೇ ನೀಡುತ್ತಿಲ್ಲ, ಇದರಲ್ಲಿ ನಷ್ಟವಾಗುತ್ತಿರುವುದು ಸ್ಕೂಲ್ ವಿದ್ಯಾರ್ಥಿಗಳಿಗೆ. ಇಂದಿನ ಮಕ್ಕಳೆ ನಾಳೆಯ ಪ್ರಜೆಗಳು ಎನ್ನುವ ಪದ ಕೇವಲ ಪುಸ್ತಕದಲ್ಲಿ ಮಾತ್ರ ನೋಡುವುದಾಗಿದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಯಾರು ಗಮನ ಹರಿಸುತ್ತಿಲ್ಲ.
ಸ್ಕೂಲ್ ಬಂದ ಆಗಿದ್ದು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಸದ್ಯದಲ್ಲಿ ವಾರ್ಷಿಕ ಪರೀಕ್ಷೆಗಳು ಇದ್ದು, ಮಕ್ಕಳು ಪರೀಕ್ಷೆಗಳ ವಿಚಾರ ಬಿಟ್ಟು ಶಾಲೆಯ ಕಟ್ಟಡದ ಬಗ್ಗೆ ಚಿಂತಿಸುವಂತಾಗಿದೆ. ಮಕ್ಕಳ ಬಗ್ಗೆ ಸರ್ಕಾರಿ ಅಧಿಕಾರಿಗಳು ಗಮನ ಹರಿಸುತ್ತಿಲ್ಲ, ಜೊತೆಗೆ ಕಟ್ಟಡ ಮಾಲಿಕ ಯಾವುದೇ ಬೇರೆ ದುರುದ್ದೇಶದಿಂದ ಸ್ಕೂಲ್ ಬಂದ ಮಾಡುತ್ತಿದ್ದಾರೆ ಎನ್ನುವ ವದಂತಿಗಳು ಸಹ ಕೇಳಿಬರುತ್ತಿವೆ.
ಏನೇ ಆಗಲಿ ಯಾವುದೇ ಬೇರೆ ಉದ್ದೇಶವಿದ್ದರು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುವುದು ಎಷ್ಟರ ಮಟ್ಟಿಗೆ ಸರಿ? ಈ ವಿಚಾರವಾಗಿ ಸರ್ಕಾರಿ ಅಧಿಕಾರಿಗಳು ಗಮನ ಹರಿಸಿ ಕಟ್ಟ ಮಾಲಿಕನ ಜೊತೆ ಒಪ್ಪಂದ ಮಾಡಿಕೊಂಡು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯ ಮಾಡಬೇಕು.
ಒಂದು ಸ್ಕೂಲ್ ನಿರ್ಮಿಸಲು ಸರ್ಕಾರ ಜಮೀನ್ ನೀಡುವಲ್ಲಿ ಇಷ್ಟೊಂದು ಆಲಸುತನ ತೋರಿಸುತ್ತಿರುವುದು, ಶಿಕ್ಷಣದ ಬಗ್ಗೆ ಸರ್ಕಾರಕ್ಕೆ ಇರುವ ಕಾಳಜಿ, ಬೆಜವಾಬ್ದಾರಿತನ ಜನರಿಗೆ ಕಾಣಿಸುತ್ತಿದೆ.
ಸರ್ಕಾರವಾಗಲಿ ಖಾಸಗಿ ವ್ಯಕ್ತಿಗಳಾಗಲಿ ಶಾಲಾ ಮಕ್ಕಳ ಜೀವನದಲ್ಲಿ ಯಾವುದೇ ದುರುದ್ದೇಶದಿಂದ ಆಟವಾಡುವುದು ಸರಿಯಲ್ಲ. ಮಕ್ಕಳ ಭವಿಷ್ಯದ ಬಗ್ಗೆ ಗಮನ ಹರಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಮೊದಲ ಆಧ್ಯತೆ ನೀಡಬೇಕು