ಬೆಳಗಾವಿ ಜಿಲ್ಲೆ ರಾಮದುರ್ಗ ಕ್ಲಸ್ಟರ್ ವ್ಯಾಪ್ತಿಯ ವಿದ್ಯಾರ್ಥಿಗಳ ಕಲಿಕಾ ಹಬ್ಬ ರಾಮದುರ್ಗ ಶಾಸಕರಾದ ಶ್ರೀ ಮಹಾದೇವಪ್ಪ ಯಾದವಾಡ ಚಾಲನೆ ನೀಡಿದರು.
ರಾಮದುರ್ಗ ಕ್ಲಸ್ಟರ್ ವ್ಯಾಪ್ತಿಯ ವಿದ್ಯಾರ್ಥಿಗಳ ಕಲಿಕಾ ಹಬ್ಬ ನೇತಾಜಿ ಸುಭಾಸ ಚಂದ್ರ ಬೋಸ ಸರಕಾರಿ ಪ್ರೌಢ ಶಾಲೆಯಲ್ಲಿ ರಾಮದುರ್ಗದ ಎಲ್ಲ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವೇಳೆ ಕಲಿಕಾ ಹಬ್ಬದ ಆಶಯ ಗೀತೆಯನ್ನು ಹಾಡಲಾಯಿತು. ಮಕ್ಕಳಿಗೆ ಕಲಿಕಾ ತರಬೇತಿಗಳನ್ನು ನೀಡಲಾಯಿತು. ಕಲಿಕಾ ಹಬ್ಬದ ತರಗತಿಗಳನ್ನು ವಿಶೇಷ ರೀತಿಯಲ್ಲಿ ಸಿದ್ಧಪಡಿಸಲಾಗಿತ್ತು.
ಶಾಲಾ ಬಾಲಕಿಯರ ಕುಂಭ ಮೇಳ, ಕಲಿಕಾ ಹಬ್ಬದ ಗೀತೆಗಳು, ಗ್ರಾಮೀಣ ಸೊಬಗಿನ ಜಾನಪದ ನೃತ್ಯಗಳು, ಕೋಲಾಟ, ಶಾಲಾ ವಿದ್ಯಾರ್ಥಿಗಳ ಲೇಜಿಮ್, ಕಿರುನಾಟಕ ಪ್ರದರ್ಶನ, ವಿದ್ಯಾರ್ಥಿಗಳ ದೇಶಭಕ್ತಿ ಗೀತೆಗಳು, ಅಲಂಕೃತ ಚಕ್ಕಡಿ ಹಾಗೂ ಟ್ರ್ಯಾಕ್ಟರ್ ಮೆರವಣಿಗೆ ಪಟ್ಟಣದಲ್ಲಿ ಹಬ್ಬದ ವಾತಾವರಣವನ್ನು ನಿರ್ಮಿಸಿತ್ತು. ರಾಮದುರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಿಕಾ ಹಬ್ಬದ ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷ. ವಲಯದ ಎಲ್ಲ ಶಾಲೆಗಳ ವಿದ್ಯಾರ್ಥಿಗಳು ಪಿರಾಮಿಡ್ ರಚನೆ, ವಿವಿಧ ಸಂಭಾಷಣೆ, ಗೀತೆಗಳ ಮೂಲಕ ಈ ಕಾರ್ಯಕ್ರಮಕ್ಕೆ ಮೆರಗು ತಂದರು. ಕಾರ್ಯಕ್ರಮ ಉದ್ಘಾಟನೆಯ ನಂತರ ಸಂಪನ್ಮೂಲ ವ್ಯಕ್ತಿಗಳು ಕಲಿಕಾ ಹಬ್ಬದ ಚಟುವಟಿಕೆಗಳನ್ನು ಆರಂಭಿಸಿದರು. ಮಕ್ಕಳು ಅತ್ಯಂತ ಉತ್ಸಾಹದಿಂದ ಈ ಚಟುವಟಿಕೆಗಳಲ್ಲಿ ಭಾಗಮಹಿಸಿದರು.