ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ, ಅಶ್ವತನಾರಾಯಣ ಉಪಸ್ಥಿತಿ. ಸಿದ್ದೇಶ್ವರ ಶ್ರೀಗಳ ಬಗ್ಗೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮಾತು.
ಸಿದ್ದೇಶ್ವರ ಶ್ರೀಗಳು ಆಶ್ರಮಕ್ಕೆ ಬರುವ ಸೌಭಾಗ್ಯ ನನಗೆ ಸಿಕ್ಕಿದೆ. ಸಿದ್ದೇಶ್ವರ ಸ್ವಾಮೀಜಿಗಳ ಮಹಾನ್ ಸಂತರು. ಸಿದ್ದೇಶ್ವರ ಶ್ರೀಗಳ ಶಕ್ತಿ ನನ್ನನ್ನು ಇಲ್ಲಿಗೆ ಕರೆ ತಂದಿದೆ. ನಮಗೆ ಸಿದ್ದೇಶ್ವರ ಶ್ರೀಗಳು ಪ್ರೇರಣೆಯಾಗಿದೆ ಎಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ.
ನಂತರ ವಿಜಯ ಸಂಕಲ್ಪ ಜಾತ್ರೆಗೆ ಬಿಜೆಪಿ ಕರ ಪತ್ರ ಹಂಚುವ ಮೂಲಕ ಬಿಜಾಪುರದಿಂದ ರಾಜ್ಯಾದ್ಯಂತ ಚಾಲನೆ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ.
ಬಿಎಲ್ಡಿ ಇಂಜಿನಿಯರಿಂಗ್ ಕಾಲೇಜು ಬಳಿಯ ವೇದಿಕೆಯಲ್ಲಿ ಮಿಸ್ಡ್‌ಕಾಲ್ ನೀಡುವ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ನಾಗಠಾಣ ವಾರ್ಡ್ ನಂ 10 ಹಾಗೂ 12ರಲ್ಲಿ ಗೋಡೆ ಬರಹ, ಸ್ಟಿಕ್ಕರ್ ಅಂಟಿಸುವ ಕಾರ್ಯ, ಕರಪತ್ರ ಹಂಚುವ ಕಾರ್ಯಕ್ರಮಕ್ಕೆ ಚಾಲನೆ
ಮನೆಗಳಿಗೆ ಕರಪತ್ರ ಹಂಚಿ, ಗೋಡೆ ಬರಹ ಬರೆದ ನಡ್ಡಾ. ಮೆರವಣಿಗೆ ಮೂಲಕ ವೇದಿಕೆಯಿಂದ 100 ಮೀಟರ್ ಅಂತರದಲ್ಲಿರುವ ಮನೆಗಳಿಗೆ ನಡ್ಡಾ ಭೇಟಿ.
ಗುರುತಿಸಲಾದ ೫ ಮನೆಗಳಿಗೆ ಕರಪತ್ರ ಹಂಚಿಕೆ ಹಾಗೂ ಗೋಡೆ ಬರಹ..ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ವೇಳೆ ಬಿಎಸ್ವೈ ಸುಸ್ತು..ಸುಸ್ತಾಗಿ ಕಾರ್ ಹತ್ತಿದ ಬಿಎಸ್ವೈ
ನಡ್ಡಾ ಹಾಗೂ ಅಶ್ವತ್ಥನಾರಾಯಣರನ್ನ ಬಿಟ್ಟು ವಾಪಸ್ ಬಂದು ಕಾರು ಹತ್ತಿದ ಬಿಎಸ್ವೈ..
ವಿಜಯಪುರ ನಗರದಲ್ಲಿ ವಿಜಯ ಸಂಕಲ್ಪ ಯಾತ್ರೆ ಮುಕ್ತಾಯ. ಸಿಂದಗಿ ಕಡೆಗೆ ಹೊರಟ ಜೆ ಪಿ ನಡ್ಡಾ.. ಮನೆ ಮನೆಗಳಿಗೆ ಕರಪತ್ರ, ಗೋಡೆ ಬರಹ ಕಾರ್ಯಕ್ರಮ ಮುಗಿಸಿ ಸಿಂದಗಿ ಕಡೆಗೆ ಪ್ರಯಾಣ. ಹೆಲಿಕಾಪ್ಟರ್ ಮೂಲಕ ಸಿಂದಗಿ ಕಡೆಗೆ ಹೊರಟ ನಡ್ಡಾ. ಎಲ್ಲ ಕಾರ್ಯಕ್ರಮದಲ್ಲು ಯತ್ನಾಳ್ ಗೈರು. ಅನಾರೋಗ್ಯ ನೆಪವೊಡ್ಡಿ ಗೈರು.
ಸಿಂದಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ ಸೋಮಜಾಳ ನಿಧನ ಹಿನ್ನೆಲೆ..ಅಂತಿಮ ದರ್ಶನ ಪಡೆದ ಹೆಚ್ಡಿಕೆ .ಭಾವುಕರಾಗಿ ಕುಟುಂಬಸ್ಥರಿಗೆ ಸಾಂತ್ವನ.. ಸೋಮಜಾಳ ಗ್ರಾಮದಲ್ಲಿ ಅಂತಿಮ ದರ್ಶನ ವ್ಯವಸ್ಥೆ..