June 20, 2025
Screenshot 2023-01-20 100045

ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ತುರಾನೂರ್ ಗ್ರಾಮದ ಹತ್ತಿರೋವ ಲಕ್ಕಪ್ಪ ಕ್ವಾರಿ ಅವರ ತೋಟದಲ್ಲಿ (ಫಾರ್ಮ್ ಹೌಸ್) ರಾಮದುರ್ಗ ವಿಧಾನ ಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಸ್ವಾಭಿಮಾನಿ ಕಾರ್ಯಕರ್ತರ ಸಭೆ ಮತ್ತು ಎಲ್ ಎ ಗಳ ತರಬೇತಿ ಶಿಬಿರ ನಡೆಯಿತು.

ಕೆಪಿಸಿಸಿ ಉಪಾಧ್ಯಕ್ಷ ಅಶೋಕ ಪಟ್ಟಣ ಅವರ ಅಧ್ಯಕ್ಷತೆಯಲ್ಲಿ ಫಾರ್ಮ್ ಹೌಸನಲ್ಲಿ ಆಯುಜಿಸಲಾದ ರಾಮದುರ್ಗ ತಾಲೂಕಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ನಡೆಯಿತು.

ಈ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಯುವಕರು, ಮಹಿಳಾ ಮುಖಂಡರು ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷ ಹೇಗೆ ಬಲಿಷ್ಠವಾಗಿ ಮಾಡಬೇಕು ಎಂದು ಚರ್ಚೆ ಮಾಡಲಾಯಿತು.

ಪ್ರತಿಯೊಂದು ಭೋತ ಮತ್ತು ಪ್ರತಿಯೊಂದು ವಾರ್ಡನಲ್ಲಿ ಸಮಿತಿ ಮಾಡಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರಬೇಕು ಎಂದು
ಕೆಪಿಸಿಸಿ ಉಪಾಧ್ಯಕ್ಷರಾದ ಶ್ರೀ ಅಶೋಕ ಮ ಪಟ್ಟಣ ಅವರಿಗೆ ಎಲ್ಲಾ ಕಾರ್ಯಕರ್ತರು ಮತ್ತು ಮುಖಂಡರು ಸಲೇಹೆ ನೀಡಿದರು ಎಲ್ಲಾವನ್ನು ಕೇಳಿ ನಂತರ ಕಾರ್ಯಕರ್ತರಗೆ ಮಾತನಾಡಿ ಹೇಳಿದರು.

ನಾವು ಗೆಲ್ಲುತ್ತೆವೆ ಎಂದು ಸುಮ್ಮನೆ ಕುಂತರೆ ಆಗಲ್ಲಾ ಪ್ರತಿ ನಿಮಿಷದಲ್ಲಿ ನಾವು ಎಲ್ಲಾರು ಸೇರಿಕೊಂಡು ಪ್ರೆತ್ನ ಮಾಡಿದರೆ ಮಾತ್ರ ಗೆಲ್ಲೋದು ಹೋದಸಾರಿ ಹೀಗೆ ಗೆಲ್ಲತೇವೆ ಅಂತಾ ಹೇಳಿಕೊಂಡು ಸುಮ್ಮನೆ ಕುಂತಿಬಿಟ್ಟಿವಿ ಆದ ಕಾರಣ ಸೋತಬಿಟ್ಟಿವಿ ಈಗ ಹಾಗೆಲ್ಲಾ ಆಗಬಾರದು.

ಇನ್ನಮೇಲೆ ಕಾಂಗ್ರೆಸ್ ಪಕ್ಷದ ಮುಖಂಡರು ಸೇರಿಕೊಂಡು ಪ್ರತಿಯೊಂದು ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷ ಏನ ಮಾಡಿದೆ ಎಂಬುದು ತಿಳಿ ಹೇಳಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ,ಅಶೋಕ ಪಟ್ಟಣ ಹೇಳಿದರು ಈ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *