October 13, 2025
Screenshot 2023-01-14 205913

ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜಿಎಲಬಿಸಿ ಪ್ರವಾಸಿ ಮಂದಿರದಲ್ಲಿ ಕುಡಚಿ ಮತಕ್ಷೇತ್ರದ ಕಾಂಗ್ರೆಸ್ ಟಿಕೇಟ ಆಕಾಂಕ್ಷಿ ಬಾಬಾಸಾಹೇಬ ಎಲ್. ಜಿನರಾಳಕರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಅವರು ಹುಕ್ಕೇರಿ, ಹತ್ತರಗಿ ಗ್ರಾಮದವರಾಗಿದ್ದು ವೃತ್ತಿಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿ ಜನಸೇವೆಗೆಂದು ರಾಜಕಾರಣವನ್ನು ಆಯ್ಕೆ ಮಾಡಿಕೊಂಡ್ಡಿದ್ದಾರೆ ಎಂದರು.

ನಾನು ವಿದ್ಯಾರ್ಥಿ ಜೀವನದಿಂದ ನಾಯಕತ್ವದ ಗುಣಗಳನ್ನು ಹೊಂದಿ ಸಾಮಾಜಿಕ ನ್ಯಾಯಕ್ಕಾಗಿ ನನ್ನನು ನಾನು ತೊಡಗಿಸಿಕೊಂಡು, ಸದ್ಯ ಸ್ವಯಂ ನಿವೃತ್ತಿ ಪಡೆದು ಕಳೆದ ಎರಡು ವರ್ಷಗಳಿಂದ ಕ್ಷೇತ್ರದಲ್ಲಿ ಒಡನಾಟ ಹೊಂದಿ, ಪ್ರತಿ ಜಿಲ್ಲಾ, ತಾಲೂಕಾ , ಗ್ರಾಮ ಪಂಚಾಯತ, ಪುರಸಭೆ ಬೂತ್ ಮಟ್ಟದ ಜನರಿಗೆ ಭೇಟಿ ನೀಡಿ ಜನರ ನಾಡಿಮಿಡಿತವನ್ನು, ಸಮಸ್ಯೆಗಳನ್ನು ಅರಿಯುವ ಕಾರ್ಯದಲ್ಲಿ ತೊಡಗಿದ್ದು, ಇಲ್ಲಿಯ ಸ್ಥಳೀಯ ಶಾಸಕರು ಜನರ ನಿರೀಕ್ಷೆಯಂತೆ ಕೆಲಸ ಮಾಡದಿರುವುದು ಮತಕ್ಷೇತ್ರದಾದ್ಯಂತ ಆರೋಗ್ಯ, ಶಿಕ್ಷಣ,ಶುದ್ಧ ಕುಡಿಯುವ ನೀರು, ರಸ್ತೆಯಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವುವಲ್ಲಿ ವಿಫಲರಾಗಿದ್ದರಿಂದ ಆಡಳತರೋಢ ವಿರೋಧಿ ವಾತಾವರಣ ನಿರ್ಮಾಣವಾಗಿ, ಕಾಂಗ್ರೆಸ್ ಪಕ್ಷದ ಅಲೆ ನಿರ್ಮಾಣವಾಗಿದೆ. ನಾನೊಬ್ಬ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ರಾಜ್ಯ, ಜಿಲ್ಲಾ, ತಾಲೂಕಾ ಪದಾಧಿಕಾರಿಗಳ ನಿಕಟ ಸಂಬಂಧ ಹೊಂದಿದ್ದು, ಪಕ್ಷ ನನಗೆ ಟಿಕೇಟ್ ನೀಡಿದರೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠರು ನನ್ನನ್ನು ಗಮನಿಸಿ, ನನ್ನ ಅರ್ಹತೆ, ಸಾಮಾಜಿಕ ಕಳಕಳಿ ಮತ್ತು ಸೇವಾ ಗುಣಗಳನ್ನು ಗುರುತಿಸಿ ನನಗೆ ಟಿಕೇಟ ದೊರಕುವ ಭರವಸೆ ವ್ಯಕ್ತಪಡಿಸಿದರು.

ಈ ಸಮಯದಲ್ಲಿ ಶಿವಾನಂದ ಹಿರೇಮಠ, ಅಕ್ಷಯ ಖೋತ, ರುದ್ರೇಶ್ ದೊಡಮನಿ, ಸಾಗರ ಕಾಂಬಳೆ, ಭೀಮಶೇನ ಕಾಂಬಳೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *