ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜನವರಿ 13 ರಂದು ಶಿಗ್ಗಾಂವಿಯಲ್ಲಿನ ಸಿಎಂ ಅವರ ಖಾಸಗಿ ಮನೆ ಎದರು ಪ್ರತಿಭಟನೆ ಪಿಕ್ಸ್ ಆಗಿದೆ. ಜೊತೆಗೆ ಪಂಚಮಸಾಲಿ ಮೀಸಲಾತಿಗೆ ವಿರೋಧ ಮಾಡಿದ ರಾಜಕೀಯ ನಾಯಕರ ಹೆಸರು ಬಹಿರಂಗ ಪಡಿಸುತ್ತೇವೆ ಎಂದು ಹೇಳಿದರು.
ಜನವರಿ 12, ಮಂಗಳವಾರ ಸಂಜೆ ಒಳಗೆ ಸರ್ಕಾರ ಗೆಜೆಟ್ ಬೀಡುಗಡೆ ಮಾಡಲು ಗಡುವು ನೀಡಿದ್ದೇವೆ. ಗೆಜೆಟ್ ಬೀಡುಗಡೆ ಮಾಡಿದರೇ ನಾವು ಪ್ರತಿಭಟನೆಯನ್ನು ಸ್ಥಗೀತಗೊಳಿಸುತ್ತೇವೆ. ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ಎಂದು ತಿಳಿಸಿದರು.
ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೇ ನೂರ ವರ್ಷ ಆಯಸ್ಸು ಎನ್ನುವ ರೀತಿ ಸಿ ಎಂ, ಅಸ್ಪಷ್ಟ ಮಾಹಿತಿ ನೀಡಿದ್ದಾರೆ. ನಮಗೆ ಸ್ಪಷ್ಟ ಮಾಹಿತಿ ಬೇಕು. ಪಂಚಮಸಾಲಿ ಮೀಸಲಾತಿ ಯಲ್ಲಿ ಏನು ನಿರ್ಣಯ ತೆಗೆದುಕೊಂಡಿದ್ದಿರಿ ಅದರ ಗೆಜೆಟ್ ನೀಡಿ, ಅದರ ಚರ್ಚೆ ನಮ್ಮಲ್ಲಿ ಆಗಬೇಕು ಇಲ್ಲವಾದರೇ ಮುಂದಿನ ಚುನಾವಣೆಯಲ್ಲಿ ಸರ್ಕಾರ ದೊಡ್ಡ ಸಮಸ್ಯೆಯನ್ನು ಎದುರಿಸಲಿದೆ ಎಂದರು.