"ಮೂಲ ಸಂವಿಧಾನದಲ್ಲಿ ಜನಪ್ರತಿನಿಧಿಗಳು ಗೌರವಧನವನ್ನು ಮಾತ್ರ ಪಡೆಯಬೇಕೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಆದರೆ, ಕಾಲಕ್ರಮೇಣ ಸಂವಿಧಾನ ತಿದ್ದುಪಡಿ ತಂದು ತಮ್ಮಿಷ್ಟದಂತೆ ನಿವೃತ್ತಿ ವೇತನ ಮತ್ತು ಭತ್ಯೆಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಸಾರ್ವಜನಿಕರ ಹಣವನ್ನು ಈ ರೀತಿ ಪೋಲು ಮಾಡುವುದನ್ನು ಸರ್ಕಾರ ಕೂಡಲೇ ತಡೆಯಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಕಾನೂನು ಹೋರಾಟ ರೂಪಿಸಲಾಗುವುದು." - ಭೀಮಪ್ಪ ಗಡಾದ್, ಸಾಮಾಜಿಕ ಕಾರ್ಯಕರ್ತ.ನೌಕರರ ಬದ್ಧತೆಗೆ ಸಿಗದ ಪಿಂಚಣಿ: ತೀವ್ರ ಅಸಮಾಧಾನ ರಾಜ್ಯದ ವಿವಿಧ ಇಲಾಖೆಗಳಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸುವ ಸರ್ಕಾರಿ ನೌಕರರಿಗೆ ಪಿಂಚಣಿ ಭದ್ರತೆಯಿಲ್ಲದೆ ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿ ಹಾಗೂ ರೈತರು ತೀವ್ರ ಸಂಕಷ್ಟದಲ್ಲಿದ್ದರೂ ಅನುದಾನದ ಕೊರತೆ ನೆಪ ಹೇಳುವ ಸರ್ಕಾರ, ಮಾಜಿ ಜನಪ್ರತಿನಿಧಿಗಳ ಹಿತಾಸಕ್ತಿ ಕಾಯಲು ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡುತ್ತಿದೆ. ಈ ತಾರತಮ್ಯ ನೀತಿಯನ್ನು ಕೂಡಲೇ ಕೈಬಿಟ್ಟು, ಮಾಜಿ ಶಾಸಕರ ಅನಗತ್ಯ ಸೌಲಭ್ಯ ಹಾಗೂ ಪಿಂಚಣಿಗೆ ತಕ್ಷಣವೇ ಕಡಿವಾಣ ಹಾಕಬೇಕೆಂದು ಭೀಮಪ್ಪ ಗಡಾದ್ ಒತ್ತಾಯಿಸಿದ್ದಾರೆ.
ಮಾಜಿ ಶಾಸಕರ ಪಿಂಚಣಿಗೆ ಕಡಿವಾಣ ಹಾಕಿ: 5 ವರ್ಷಗಳಲ್ಲಿ 210 ಕೋಟಿ ರೂ. ವೆಚ್ಚ, ಸರ್ಕಾರಕ್ಕೆ ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಭೀಮಪ್ಪ ಗಡಾದ್
ಕಳೆದ ಐದು ವರ್ಷಗಳಲ್ಲಿ ಮಾಜಿ ಶಾಸಕರ ಪಿಂಚಣಿಗೆ 210 ಕೋಟಿ ರೂ. ವೆಚ್ಚ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ್ ಆಕ್ರೋಶ ವ್ಯಕ್ತಪಡಿಸಿದ್ದು, ಕೋರ್ಟ್ ಮೆಟ್ಟಿಲೇರುವ ಎಚ್ಚರಿಕೆ ನೀಡಿದ್ದಾರೆ.
ಈ ಲೇಖನವನ್ನು ಆಲಿಸಿ TTS AI
B News Desk
Senior Staff Journalist and Correspondent at B News. Covering breaking global stories, contemporary culture, and modern innovations.