Home / ಬೆಳಗಾವಿ / ಕುಡಿಯುವ ನೀರಿಗಾಗಿ ಹಾಹಾಕಾರ; ಖಾಲಿ ಕೊಡ ಹಿಡಿದ...

ಕುಡಿಯುವ ನೀರಿಗಾಗಿ ಹಾಹಾಕಾರ; ಖಾಲಿ ಕೊಡ ಹಿಡಿದು ಪಂಚಾಯತ್‌ಗೆ ಮುತ್ತಿಗೆ ಹಾಕಿ ಆಕ್ರೋಶ

B
By B News Desk
October 22, 2026 0 comments Edit Article

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಎ ರಾಜಾಪುರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಮುಡಿದೆ. ಕಳೆದ ಒಂದು ತಿಂಗಳಿಂದ ನೀರಿಲ್ಲದೆ ಪರದಾಡುತ್ತಿರುವ ಜನರು, ಖಾಲಿ ಕೊಡ ಹಿಡಿದು ಪಂಚಾಯತ್‌ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಲೇಖನವನ್ನು ಆಲಿಸಿ TTS AI

2 ನಿಮಿಷಗಳ ಓದು • 197 ಪದಗಳು (ಸಿದ್ಧವಾಗಿದೆ)
ಅಕ್ಷರ ಗಾತ್ರ:
ವೇಗ:
ಕುಡಿಯುವ ನೀರಿಗಾಗಿ ಹಾಹಾಕಾರ; ಖಾಲಿ ಕೊಡ ಹಿಡಿದು ಪಂಚಾಯತ್‌ಗೆ ಮುತ್ತಿಗೆ ಹಾಕಿ ಆಕ್ರೋಶ
ಬೆಳಗಾವಿ: ಜಿಲ್ಲೆಯ ಮೂಡಲಗಿ ತಾಲೂಕಿನ ಎ ರಾಜಾಪುರ ಗ್ರಾಮದಲ್ಲಿ ಕುಡಿಯುವ ನೀರಿಲ್ಲದೆ ಕಳೆದೊಂದು ತಿಂಗಳಿಂದ ಜನರು ತೀವ್ರ ಪರದಾಡುತ್ತಿದ್ದು, ಆಕ್ರೋಶಗೊಂಡ ಗ್ರಾಮಸ್ಥರು ಖಾಲಿ ಕೊಡಗಳನ್ನು ಹಿಡಿದು ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಒಂದು ತಿಂಗಳಿಂದ ಕುಡಿಯಾಲು ನೀರು ಸಿಗದೆ ಬಡಾವಣೆಗಳ ಜನರು ಹೈರಾಣಾಗಿದ್ದಾರೆ. ಗ್ರಾಮದಲ್ಲಿ ತೀವ್ರ ವರದಿಯಾಗಿರುವ ನೀರಿನ ಬಿಕ್ಕಟ್ಟಿಗೆ ಪಂಚಾಯತ್ ಪಿಡಿಒ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಣ ನೀಡಿದವರಿಗೆ ಮಾತ್ರ ಮನೆಮನೆಗೆ ನೀರಿನ ಕನೆಕ್ಷನ್ ನೀಡಲಾಗುತ್ತಿದ್ದು, ದಲಿತ ಸಮಾಜದ ಜನರು ವಾಸಿಸುವ ಕಾಲೋನಿಗೆ ಮಾತ್ರ ಕುಡಿಯುವ ನೀರನ್ನು ಪೂರೈಸುತ್ತಿಲ್ಲ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ: ಪಂಚಾಯತ್ ಪಿಡಿಒ ಹನುಮಂತ ಬಸಳಿಗುಂದಿ ಮತ್ತು ಕಂಪ್ಯೂಟರ್ ಆಪರೇಟರ್ ವಿರುದ್ಧ ಗ್ರಾಮಸ್ಥರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನೀರಿಗಾಗಿ ಅಲೆದಾಡಿ ಸುಸ್ತಾಗಿರುವ ಜನರು, ಪಿಡಿಒಗೆ ಸಮಸ್ಯೆ ತಿಳಿಸಿದರೂ ಯಾವುದೇ ಸ್ಪಂದನೆ ನೀಡಿಲ್ಲ ಎಂದು ದೂರಿದ್ದಾರೆ. ಕೂಡಲೇ ಪಿಡಿಒ ವಿರುದ್ಧ ಇಲಾಖಾ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
"ನಾವು ಕಳೆದ ಒಂದು ತಿಂಗಳಿಂದ ನೀರಿಲ್ಲದೆ ಪರದಾಡುತ್ತಿದ್ದೇವೆ. ಹಣ ಕೊಟ್ಟವರಿಗೆ ಮಾತ್ರ ನೀರು ಕೊಡುತ್ತಿದ್ದಾರೆ. ನಮ್ಮ ಕಾಲೋನಿಗೆ ನೀರು ಬಿಡದೆ ತಾರತಮ್ಯ ಮಾಡುತ್ತಿರುವ ಪಿಡಿಒ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು," ಎಂದು ಅಳಲು ತೋಡಿಕೊಂಡಿದ್ದಾರೆ ಸ್ಥಳೀಯ ನಿವಾಸಿಗಳು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರತಿನಿಧಿಸುವ ಕ್ಷೇತ್ರದ ವ್ಯಾಪ್ತಿಯಲ್ಲೇ ಇಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಪರಿಹರಿಸುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಹಕ್ಕುತ್ಯಾಗ
ಈ ಲೇಖನವು AI ಬಳಸಿ ರಚಿತವಾಗಿರಬಹುದು, ಸಂಪಾದಿಸಿರಬಹುದು ಅಥವಾ ಅನುವಾದಿಸಿರಬಹುದು ಹಾಗೂ ಇದರಲ್ಲಿ ವಾಸ್ತವಾಂಶ, ಭಾಷಾಂತರ ಅಥವಾ ಸಾಂದರ್ಭಿಕ ದೋಷಗಳಿರಬಹುದು. ಪ್ರಮುಖ ಮಾಹಿತಿಯನ್ನು ಅಧಿಕೃತ ಮೂಲಗಳಿಂದ ದೃಢಪಡಿಸಿಕೊಳ್ಳಲು ಓದುಗರಿಗೆ ಸಲಹೆ ನೀಡಲಾಗುತ್ತದೆ. AI-ನೆರವಿನ ವಿಷಯದಿಂದ ಉಂಟಾಗುವ ಯಾವುದೇ ತಪ್ಪುಗಳಿಗೆ ಪ್ರಕಾಶಕರು ಜವಾಬ್ದಾರರಾಗಿರುವುದಿಲ್ಲ. ಕಾನೂನು ಹಕ್ಕುತ್ಯಾಗ
TAGS: ಬೆಳಗಾವಿ ಸುದ್ದಿ ಕುಡಿಯುವ ನೀರು ಮೂಡಲಗಿ ಪಂಚಾಯತ್ ಮುತ್ತಿಗೆ ಬೆಳಗಾವಿ ನ್ಯೂಸ್ Karnataka News
SHARE THIS ARTICLE
B

B News Desk

Senior Staff Journalist and Correspondent at B News. Covering breaking global stories, contemporary culture, and modern innovations.

B News Live Search

Search Articles

Type any keyword to instantly search stories across categories.
Send News