August 19, 2025
IMG_20240511_191532

ಹುಬ್ಬಳ್ಳಿ: ನಗರದಾದ್ಯಂತ ಇಂದು ಮಧ್ಯಾಹ್ನದಿಂದ ಮಳೆರಾಯನ ಆಗಮನದಿಂದ ಅವಳಿ ನಗರಗಳಾದ ಹುಬ್ಬಳ್ಳಿ ಧಾರವಾಡದಲ್ಲಿ ಗುಡುಗು ಸಹಿತ ಮಳೆ ಸುರಿಯಿತು.


ಜೋರಾಗಿ ಸುರಿದ ಮಳೆಯಿಂದಾಗಿ ನಗರದ ಹಲವೆಡೆ ರಸ್ತೆಗಳು ತುಂಬಿ ನೀರು ಹರಿಯತೊಡಗಿತು. ಹುಬ್ಬಳ್ಳಿಯ ಬಸವ ನಗರ ಹಾಗೂ ಮೇದಾರ ಓಣಿಗಳಲ್ಲಿ ರಸ್ತೆಗಳು ತುಂಬಿತ್ತು. ಅಷ್ಟೇ ಅಲ್ಲದೇ ಮನೆಗಳಲ್ಲಿಯೂ ಸಹ ನೀರು ನುಗ್ಗಿದ ಪರಿಣಾಮ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ‌.
ಮಾರುಕಟ್ಟೆಗೆ ಬಂದವರು ಏಕಾಏಕಿ ಸುರಿದ ಮಳೆಯಿಂದ ಪರದಾಡಿದರು. ಬೈಕ್‌ ಸವಾರರು ನೆನೆಯುತ್ತಲೇ ಸಂಚರಿಸಿದ ದೃಶ್ಯ ಕಂಡು ಬಂದಿತು.
ಚನ್ನಮ್ಮ ವೃತ್ತ, ಜನತಾ ಬಜಾರ್ ಸೇರಿದಂತೆ ವಿವಿಧೆಡೆ, ಬೀದಿ ಬದಿ ವ್ಯಾಪಾರಿಗಳು ತರಕಾರಿ ಮತ್ತು ಹಣ್ಣುಗಳನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಪರದಾಡಿದರು. .

1 thought on “ಮಳೆಯ ಆರ್ಭಟಕ್ಕೆ ತತ್ತರಿಸಿದ ಹುಬ್ಬಳ್ಳಿ ಮಂದಿ

  1. ನೀರು ಯಾಕೆ ರಸ್ತೆಯಲ್ಲಿ ತುಂಬಿತು…. ಸ್ಮಾರ್ಟ್ ಸಿಟಿ ಕಳಪೆ ಕಾಮಗೆರಿ ಇಂದ ಇಂತಹ ಪರಸ್ಥಿತಿ ಬಂದಿದೆ….ಮಹಾನಗರ ಪಾಲಿಕೆಯ ನಿರ್ಲಕ್ಷ ಹುಬ್ಬಳ್ಳಿ ಧಾರವಾಡ ಮಾನ ಮರ್ಯಾದೆ ಒಂದೇ ಮಳೆಗೆ ಕೊಚ್ಚಿ ಹೋಗಿದೆ…. ಬರೆಯೋದು ಬರದ್ರೆ ಚನ್ನಾಗಿರೋದು….

Leave a Reply to ಸುರೇಶ Cancel reply

Your email address will not be published. Required fields are marked *