Home / ಬೆಳಗಾವಿ / ಯಳ್ಳೂರು: 6 ಬಂಧನ

ಯಳ್ಳೂರು: 6 ಬಂಧನ

B
By B News Desk
2026-09-12 18299 views 21 comments Edit Article

ಬೆಳಗಾವಿ: ಯಳ್ಳೂರಿನ ಮಹಾರಾಷ್ಟ್ರ ರಾಜ್ಯ ಫಲಕ ತೆರವು  ಪ್ರಕರಣಕ್ಕೆ ಸಂಬಂಧಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ ಕಿಡಿಗೇಡಿಗಳ ವಿರುದ್ಧ ಪೊಲೀಸರು 7 ಪ್ರಕರಣ ದಾಖಲಿಸಿಕೊಂಡಿದ್ದು, 6 ಜನರನ್ನು ಬಂಧಿಸಿದ್ದಾರೆ. ಇನ್ನಷ್ಟು...

ಯಳ್ಳೂರು: 6 ಬಂಧನ
ಬೆಳಗಾವಿ: ಯಳ್ಳೂರಿನ ಮಹಾರಾಷ್ಟ್ರ ರಾಜ್ಯ ಫಲಕ ತೆರವು  ಪ್ರಕರಣಕ್ಕೆ ಸಂಬಂಧಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ ಕಿಡಿಗೇಡಿಗಳ ವಿರುದ್ಧ ಪೊಲೀಸರು 7 ಪ್ರಕರಣ ದಾಖಲಿಸಿಕೊಂಡಿದ್ದು, 6 ಜನರನ್ನು ಬಂಧಿಸಿದ್ದಾರೆ. ಇನ್ನಷ್ಟು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ, ಅಬಕಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಳ್ಳೂರು ಗಲಭೆ ಬಗ್ಗೆ ಸಮಗ್ರವಾಗಿ ವಿಡಿಯೋ ಚಿತ್ರೀಕರಣ, ಛಾಯಾಚಿತ್ರಗಳನ್ನು ಕಲೆ ಹಾಕಲಾಗಿದ್ದು, ಅವುಗಳನ್ನು ಪರಿಶೀಲನೆ ನಡೆಸಿದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಹಕ್ಕುತ್ಯಾಗ
ಈ ಲೇಖನವು AI ಬಳಸಿ ರಚಿತವಾಗಿರಬಹುದು, ಸಂಪಾದಿಸಿರಬಹುದು ಅಥವಾ ಅನುವಾದಿಸಿರಬಹುದು ಹಾಗೂ ಇದರಲ್ಲಿ ವಾಸ್ತವಾಂಶ, ಭಾಷಾಂತರ ಅಥವಾ ಸಾಂದರ್ಭಿಕ ದೋಷಗಳಿರಬಹುದು. ಪ್ರಮುಖ ಮಾಹಿತಿಯನ್ನು ಅಧಿಕೃತ ಮೂಲಗಳಿಂದ ದೃಢಪಡಿಸಿಕೊಳ್ಳಲು ಓದುಗರಿಗೆ ಸಲಹೆ ನೀಡಲಾಗುತ್ತದೆ. AI-ನೆರವಿನ ವಿಷಯದಿಂದ ಉಂಟಾಗುವ ಯಾವುದೇ ತಪ್ಪುಗಳಿಗೆ ಪ್ರಕಾಶಕರು ಜವಾಬ್ದಾರರಾಗಿರುವುದಿಲ್ಲ. ಕಾನೂನು ಹಕ್ಕುತ್ಯಾಗ
TAGS: ಬೆಳಗಾವಿ B News ಕನ್ನಡ ಸುದ್ದಿ ಬ್ರೇಕಿಂಗ್
SHARE THIS ARTICLE
B

B News Desk

Senior Staff Journalist and Correspondent at B News. Covering breaking global stories, contemporary culture, and modern innovations.

B News Live Search

Search Articles

Type any keyword to instantly search stories across categories.