"ನಾನು ರಾಹುಲ್ ಜೊತೆಯಲ್ಲೇ ಬಾಳುತ್ತೇನೆ ಎಂದು ಸಹನಾ ಖಡಾಖಂಡಿತವಾಗಿ ಹೇಳಿದ್ದಳು. ಆದರೆ ಗಂಡ ವಿರೇಶ್ ನಿಮ್ಮಿಬ್ಬರನ್ನು ನೆಮ್ಮದಿಯಿಂದ ಬಾಳಲು ಬಿಡುವುದಿಲ್ಲ ಎಂದು ಗದರಿಸಿದ್ದನು."ದೂರು ನೀಡಲು ಹೋಗಿ ದುರಂತ ಅಂತ್ಯ: ಕಳೆದ ಮಂಗಳವಾರ ಗಂಡನ ಮನೆಯಿಂದ ಹೊರಟಿದ್ದ ಸಹನಾ, ಮಂಡ್ಯದ ಗುನ್ನಾಯಕನಹಳ್ಳಿಯಲ್ಲಿದ್ದ ಅಜ್ಜಿ ಮನೆಗೆ ಬಂದಿದ್ದಳು. ಗುರುವಾರ ಆಕೆಯನ್ನು ಕರೆದೊಯ್ದ ರಾಹುಲ್, ಗಂಡ ವಿರೇಶ್ ವಿರುದ್ಧ ಪೊಲೀಸ್ ದೂರು ನೀಡಲು ಯೋಜಿಸಿದ್ದರು. ಆದರೆ, ವಿರೇಶ್ ತಮಗೆ ನೆಮ್ಮದಿಯಿಂದ ಜೀವಿಸಲು ಬಿಡುವುದಿಲ್ಲ ಎಂಬ ಭಯ ಹಾಗೂ ನಿಸ್ಸಹಾಯಕತೆಯಿಂದ ಮನನೊಂದ ಇಬ್ಬರೂ ಶುಕ್ರವಾರ ಬೆಳಿಗ್ಗೆ ರೈಲಿಗೆ ತಲೆಕೊಟ್ಟು ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸರ ಭೇಟಿ: ಘಟನಾ ಸ್ಥಳಕ್ಕೆ ಮಂಡ್ಯ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇಬ್ಬರು ಕಂದಮ್ಮಗಳನ್ನು ತೊರೆದು ತಾಯಿ ಕೈಗೊಂಡ ಈ ನಿರ್ಧಾರ ಸ್ಥಳೀಯರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.
ಪ್ರಿಯಕರನೊಂದಿಗೆ ರೈಲಿಗೆ ತಲೆಕೊಟ್ಟು ವಿವಾಹಿತೆ ಆತ್ಮಹತ್ಯೆ; ಇಬ್ಬರು ಮಕ್ಕಳ ತಾಯಿಯ ದುರಂತ ಅಂತ್ಯ
ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಟ್ರಾಕ್‌ನಲ್ಲಿ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ 25 ವರ್ಷದ ಸಹನಾ ಹಾಗೂ ಪ್ರಿಯಕರ ರಾಹುಲ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಲೇಖನವನ್ನು ಆಲಿಸಿ TTS AI
B News Desk
Senior Staff Journalist and Correspondent at B News. Covering breaking global stories, contemporary culture, and modern innovations.