"ಶ್ರೀಕ್ಷೇತ್ರಕ್ಕೆ ಸ್ವಾಗತ ಕೋರುವ ಹೆಬ್ಬಾಗಿಲನ್ನೇ ಜೆಸಿಬಿ ಬಳಸಿ ಧ್ವಂಸಗೊಳಿಸಿರುವುದು ಅಕ್ಷಮ್ಯ ಅಪರಾಧ. ಸೋಲಾರ್ ಕಂಪನಿಗಳ ದಬ್ಬಾಳಿಕೆ ಹೆಚ್ಚಾಗಿದ್ದು, ಕೂಡಲೇ ಸಂಬಂಧಿತರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು," ಎಂದು ಉಜ್ಜಿನಿ ಕ್ಷೇತ್ರದ ಅಸಂಖ್ಯಾತ ಭಕ್ತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.ಸಂಘಟನೆಗಳಿಂದ ಕಠಿಣ ಎಚ್ಚರಿಕೆ: ಕೂಡ್ಲಿಗಿ ಪಟ್ಟಣ ಸೇರಿದಂತೆ ಕ್ಷೇತ್ರದ ಭಕ್ತರು, ವಂದೇ ಮಾತರಂ ಜಾಗೃತಿ ವೇದಿಕೆ, ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ವಿವಿಧ ಪ್ರಮುಖ ಸಂಘಟನೆಗಳು ಈ ಕೂಡಲೇ ಮಧ್ಯಪ್ರವೇಶಿಸಿ ನೆಲಕಚ್ಚಿರುವ ನಾಮಫಲಕಗಳನ್ನು ಪುನರ್ ನಿರ್ಮಿಸಬೇಕೆಂದು ಒತ್ತಾಯಿಸಿವೆ. ಅಲ್ಲದೆ, ಈ ಮಾರ್ಗದಲ್ಲಿ ಸೋಲಾರ್ ಮತ್ತು ಇತರೆ ಭಾರೀ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿ, ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸೋಲಾರ್ ಕಂಪನಿಗಳ ಭಾರೀ ವಾಹನಗಳ ಆರ್ಭಟಕ್ಕೆ ನೆಲಕಚ್ಚಿದ ಉಜ್ಜಿನಿ ಸ್ವಾಗತ ದ್ವಾರಬಾಗಿಲು; ಆಡಳಿತ ಯಂತ್ರದ ಮೌನಕ್ಕೆ ಭಕ್ತರ ಆಕ್ರೋಶ
ಕೂಡ್ಲಿಗಿಯಿಂದ ಉಜ್ಜಿನಿ ಕ್ಷೇತ್ರಕ್ಕೆ ತೆರಳುವ ಮಾರ್ಗದಲ್ಲಿ ಸೋಲಾರ್ ಕಂಪನಿಗಳ ಭಾರೀ ವಾಹನಗಳ ಅಬ್ಬರಕ್ಕೆ ಸ್ವಾಗತ ದ್ವಾರಬಾಗಿಲು ನೆಲಕಚ್ಚಿದ್ದು, ವಾರ ಕಳೆದರೂ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಲೇಖನವನ್ನು ಆಲಿಸಿ TTS AI
B News Desk
Senior Staff Journalist and Correspondent at B News. Covering breaking global stories, contemporary culture, and modern innovations.