ನ್ಯಾಯಾಲಯಗಳಲ್ಲಿ ಹಾಗೂ ತಮ್ಮ ಕಚೇರಿಗಳಲ್ಲಿ ವಕೀಲರು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸುವಂತಹ ದುಸ್ಥಿತಿ ನಿರ್ಮಾಣವಾಗಿದೆ. ತಪ್ಪಿತಸ್ಥರಿಗೆ ಕಠಿಣಾತಿಕಠಿಣ ಶಿಕ್ಷೆಯಾಗಬೇಕು ಮತ್ತು ಸಮಗ್ರ ವಕೀಲರ ಹಿತರಕ್ಷಣಾ ಕಾಯ್ದೆಯನ್ನು ಸರ್ಕಾರ ಕೂಡಲೇ ಜಾರಿಗೆ ತರಬೇಕು ಎಂದು ಜಿ. ಹೊನ್ನೂರಪ್ಪ ಆಗ್ರಹಿಸಿದರು.ಪ್ರಮುಖರ ಭಾಗಿ: ಈ ಪ್ರತಿಭಟನೆಯಲ್ಲಿ ಹಿರಿಯ ವಕೀಲರಾದ ಹೋ.ಮ. ಪಂಡಿತರಾಧ್ಯ ಸೇರಿದಂತೆ ಹಲವರು ಮಾತನಾಡಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಬಿ. ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಸಿ. ವಿರುಪಾಕ್ಷಪ್ಪ, ಸಹ ಕಾರ್ಯದರ್ಶಿ ಡಿ.ಹೆಚ್. ದುರುಗೇಶ್, ಖಜಾಂಚಿ ಕೆ.ಜಿ. ಸಾವಿತ್ರಿಬಾಯಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಡಿ. ಲಕ್ಷ್ಮೀದೇವಿ, ಎಂ. ರಾಮಪ್ಪ ಸೇರಿದಂತೆ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ವಕೀಲರ ಸಂಘದಿಂದ ತಹಶೀಲ್ದಾರ್‌ಗೆ ಮನವಿ
ರಾಜ್ಯದಲ್ಲಿ ವಕೀಲರ ಮೇಲಿನ ಹಲ್ಲೆ ಹಾಗೂ ಕೊಲೆಗಳನ್ನು ಖಂಡಿಸಿ, ಕಟ್ಟುನಿಟ್ಟಿನ ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯಿಸಿ ಕೂಡ್ಲಿಗಿ ವಕೀಲರ ಸಂಘದಿಂದ ತಹಶೀಲ್ದಾರ್‌ಗೆ ಮನವಿ.
ಈ ಲೇಖನವನ್ನು ಆಲಿಸಿ TTS AI
B News Desk
Senior Staff Journalist and Correspondent at B News. Covering breaking global stories, contemporary culture, and modern innovations.