"ಸಕ್ಕರೆ ಕಾರ್ಖಾನೆಗಳು ಹಾಗೂ ಸರ್ಕಾರ ಸೇರಿ ರೈತರ ಶ್ರಮವನ್ನು ಲೂಟಿ ಮಾಡುತ್ತಿವೆ. ಕಬ್ಬಿಗೆ ನ್ಯಾಯಯುತ ಎಮ್‌ಎಸ್‌ಪಿ ಮತ್ತು ಎಸ್‌ಎಪಿ ದರ ಘೋಷಿಸುವವರೆಗೆ ನಮ್ಮ ಜೈಲ್ ಭರೋ ಚಳವಳಿ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ." ಎಂದು ಪ್ರತಿಭಟನಾ ನಿರತ ರೈತ ನಾಯಕರು ಎಚ್ಚರಿಸಿದ್ದಾರೆ.ಬೃಹತ್ ಪಾದಯಾತ್ರೆ ಹಾಗೂ ಬೈಕ್ ರ‍್ಯಾಲಿಯ ಹಿನ್ನೆಲೆಯಲ್ಲಿ ಕಬ್ಬೂರ-ಹತ್ತರಗಿ ರಾಷ್ಟ್ರೀಯ ಹೆದ್ದಾರಿ ಹಾಗೂ ಬೆಳಗಾವಿ ನಗರ ಸಂಪರ್ಕಿಸುವ ಪ್ರಮುಖ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆಯು ಬಿಗಿ ಭದ್ರತೆ ಹಾಗೂ ಡ್ರೋನ್ ಕ್ಯಾಮೆರಾಗಳ ಮೂಲಕ ಕಣ್ಗಾವಲು ವಹಿಸಿದೆ.
'ಜೈಲ್ ಚಲೋ' ಚಳವಳಿ ಆರಂಭಿಸಿದ ರೈತರು
ಕಬ್ಬಿಗೆ ಎಮ್‌ಎಸ್‌ಪಿ ಹಾಗೂ ಎಸ್‌ಎಪಿ ದರ ಘೋಷಣೆಗೆ ಆಗ್ರಹಿಸಿ ಬೆಳಗಾವಿಯ ಮೂಡಲಗಿ ತಾಲೂಕಿನಿಂದ ಹಿಂಡಲಗಾ ಜೈಲಿನತ್ತ ರೈತರು ಬೃಹತ್ ಜೈಲ್ ಭರೋ ಪಾದಯಾತ್ರೆ ನಡೆಸುತ್ತಿದ್ದಾರೆ.
ಈ ಲೇಖನವನ್ನು ಆಲಿಸಿ TTS AI
B News Desk
Senior Staff Journalist and Correspondent at B News. Covering breaking global stories, contemporary culture, and modern innovations.