ಕಾರ್ಖಾನೆ ಆರಂಭವಾದ ಮೇಲೆ ಅಥವಾ ಉತ್ಪಾದನೆ ಹೆಚ್ಚಾದಾಗ ಸಕ್ಕರೆ ದರ ಕುಸಿಯುತ್ತದೆ. ಸಕ್ಕರೆ ಕಾರ್ಖಾನೆ ಮಾಲೀಕರಿಗೂ ಒಂದು ಗ್ಯಾರಂಟಿ ಬೇಕಲ್ಲವೇ? ಅದಕ್ಕಾಗಿಯೇ ಕೇಂದ್ರ ಸರ್ಕಾರ ಎಂಎಸ್‌ಪಿ ದರ ನಿಗದಿ ಮಾಡಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಈಡೇರಿಸಲು ವಿಫಲವಾಗಿ ಈಗ ಚಂಡನ್ನು ಬೆಂಗಳೂರಿನ ಕಡೆ ಎಸೆಯುತ್ತಿದೆ ಎಂದು ಸತೀಶ್ ಜಾರಕಿಹೊಳಿ ಕಿಡಿಕಾರಿದರು.ವಾಣಿಜ್ಯ ಬಳಕೆಯ ಸಕ್ಕರೆ ದರ ಹೆಚ್ಚಳ ಒಳ್ಳೆಯ ಐಡಿಯಾ: ಸಕ್ಕರೆ ಆಮದು ಮತ್ತು ಕಮರ್ಷಿಯಲ್ ಬಳಕೆಯ ಬಗ್ಗೆ ಮಾತನಾಡಿದ ಅವರು, ದೇಶದಲ್ಲಿ ಕೇವಲ ಶೇಕಡಾ 30ರಷ್ಟು ಮಾತ್ರ ಸಕ್ಕರೆ ಗೃಹೋಪಯೋಗಕ್ಕೆ ಬಳಕೆಯಾಗುತ್ತಿದ್ದು, ಉಳಿದ ಶೇಕಡಾ 70ರಷ್ಟು ಭಾಗ ವಾಣಿಜ್ಯ ಬಳಕೆಗೆ ಉಪಯೋಗವಾಗುತ್ತದೆ. ವಾಣಿಜ್ಯ ಬಳಕೆಯ ಸಕ್ಕರೆ ದರವನ್ನು ಹೆಚ್ಚಿಸುವುದು ಉತ್ತಮ ಕಲ್ಪನೆ ಹಾಗೂ ಇದರಿಂದ ಹೆಚ್ಚಿನ ಲಾಭವೂ ಸಿಗಲಿದೆ. ಆದರೆ ಕೇಂದ್ರ ಸರ್ಕಾರ ಕಮರ್ಷಿಯಲ್ ಸಕ್ಕರೆ ದರವನ್ನು ಹೆಚ್ಚಿಸುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಮುಂದಿನ ದಿನಗಳಲ್ಲಿ ರೈತ ಮುಖಂಡರ ಸಭೆಯ ಬಳಿಕ ಸಮಸ್ಯೆಗೆ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರೈತರ ಸಮಸ್ಯೆ ಬಗೆಹರಿಸಲು ಡಿಸಿ ನೇತೃತ್ವದಲ್ಲಿ ಸಭೆ: ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿಯಲ್ಲಿ ರೈತರ ಸಮಸ್ಯೆಗಳ ಇತ್ಯರ್ಥಕ್ಕಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಎಂಎಸ್‌ಪಿ ಹಾಗೂ ಸಕ್ಕರೆ ದರ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧವೂ ಅವರು ವಾಗ್ದಾಳಿ ನಡೆಸಿದ್ದಾರೆ.
ಈ ಲೇಖನವನ್ನು ಆಲಿಸಿ TTS AI
B News Desk
Senior Staff Journalist and Correspondent at B News. Covering breaking global stories, contemporary culture, and modern innovations.