Home / ಬೆಳಗಾವಿ / ಪತ್ರಕರ್ತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ:...

ಪತ್ರಕರ್ತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ: ಜಿ.ಎಂ. ರಾಜಶೇಖರ್ ಒತ್ತ...

B
By B News Desk
November 23, 2026 0 comments Edit Article

ಪತ್ರಕರ್ತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ: ಜಿ.ಎಂ. ರಾಜಶೇಖರ್ ಒತ್ತಾಯ ಪತ್ರಕರ್ತರ ಸೌಲಭ್ಯಗಳ ಮಾನದಂಡ ಸರಳೀಕರಣಕ್ಕೆ ಆಗ್ರಹ ಬೈಲಹೊಂಗಲದಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ...

ಈ ಲೇಖನವನ್ನು ಆಲಿಸಿ TTS AI

3 ನಿಮಿಷಗಳ ಓದು • 436 ಪದಗಳು (ಸಿದ್ಧವಾಗಿದೆ)
ಅಕ್ಷರ ಗಾತ್ರ:
ವೇಗ:
ಪತ್ರಕರ್ತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ: ಜಿ.ಎಂ. ರಾಜಶೇಖರ್ ಒತ್ತ...
ಪತ್ರಕರ್ತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ: ಜಿ.ಎಂ. ರಾಜಶೇಖರ್ ಒತ್ತಾಯ

ಪತ್ರಕರ್ತರ ಸೌಲಭ್ಯಗಳ ಮಾನದಂಡ ಸರಳೀಕರಣಕ್ಕೆ ಆಗ್ರಹ

ಬೈಲಹೊಂಗಲದಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ನೂತನ ಕಚೇರಿ ಉದ್ಘಾಟನೆ

ಬೈಲಹೊಂಗಲ: ಪತ್ರಕರ್ತರು ಸಮಾಜದ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ, ರಾಜ್ಯದಾದ್ಯಂತ ಅನೇಕ ಪತ್ರಕರ್ತರು ಆರ್ಥಿಕ, ಸಾಮಾಜಿಕ ಹಾಗೂ ವೃತ್ತಿಪರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಿ, ಅವರಿಗೆ ನೀಡುವ ಸೌಲಭ್ಯಗಳ ಮಾನದಂಡಗಳನ್ನು ಸರಳೀಕರಿಸುವ ಮೂಲಕ ಅರ್ಹ ಪತ್ರಕರ್ತರಿಗೆ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಜಿ.ಎಂ. ರಾಜಶೇಖರ್ ಒತ್ತಾಯಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಬೈಲಹೊಂಗಲ ಕಚೇರಿ ಉದ್ಘಾಟನೆ ಹಾಗೂ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಪತ್ರಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪತ್ರಕರ್ತರ ಬದುಕನ್ನು ಗೌರವಯುತ ಹಾಗೂ ಸಹನೀಯವಾಗಿಸುವ ಹೊಣೆಗಾರಿಕೆ ಸರ್ಕಾರ, ಸಮಾಜ ಮತ್ತು ಪತ್ರಕರ್ತರ ಸಂಘಟನೆಗಳ ಮೇಲಿದೆ ಎಂದರು.
ಪತ್ರಕರ್ತರ ಸಂಘಟನೆಗಳ ನಡುವಿನ ಭೇದಭಾವವಿಲ್ಲದೆ, ಎಲ್ಲ ಪತ್ರಕರ್ತರನ್ನು ಒಗ್ಗೂಡಿಸಿ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಘ ಕಾರ್ಯನಿರ್ವಹಿಸುತ್ತಿದೆ.

ಪತ್ರಕರ್ತರ ಹಕ್ಕು ಮತ್ತು ಹೊಣೆಗಾರಿಕೆಗಳ ಕುರಿತು ಜಾಗೃತಿ ಮೂಡಿಸುವುದು, ಪತ್ರಿಕಾ ಸ್ವಾತಂತ್ರ್ಯವನ್ನು ಸಂರಕ್ಷಿಸುವುದು ಹಾಗೂ ಪತ್ರಕರ್ತರ ವೃತ್ತಿ ಗೌರವವನ್ನು ಎತ್ತಿಹಿಡಿಯುವುದು ಸಂಘದ ಪ್ರಮುಖ ಆಶಯವಾಗಿದೆ ಎಂದು ತಿಳಿಸಿದರು.

ಸರ್ಕಾರದಿಂದ ಅಧಿಕೃತವಾಗಿ ನೋಂದಾಯಿತವಾಗಿರುವ ಸಂಘವು ರಾಜ್ಯಮಟ್ಟದಲ್ಲಿ ಗಣ್ಯರು ಹಾಗೂ ಸಚಿವರಿಂದ ಉದ್ಘಾಟನೆಗೊಂಡಿದ್ದು, ಪ್ರಸ್ತುತ ರಾಜ್ಯದ 28 ಜಿಲ್ಲೆಗಳಲ್ಲಿ ಸುಮಾರು 3,000 ಸದಸ್ಯರನ್ನು ಹೊಂದಿದೆ. ಪತ್ರಕರ್ತರಿಗೆ ದೊರೆಯಬೇಕಾದ ಸರ್ಕಾರಿ ಸೌಲಭ್ಯಗಳಿಗೆ ಕಠಿಣ ಮಾನದಂಡಗಳನ್ನು ವಿಧಿಸಿರುವುದರಿಂದ ಅನೇಕ ಅರ್ಹ ಪತ್ರಕರ್ತರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರದ ಗಮನಕ್ಕೆ ಮನವಿ ಸಲ್ಲಿಸಿ, ಸೌಲಭ್ಯಗಳ ಮಾನದಂಡಗಳನ್ನು ಸಡಿಲಗೊಳಿಸುವಂತೆ ಒತ್ತಾಯಿಸಲಾಗಿದೆ ಎಂದರು.

ಪತ್ರಕರ್ತರು ಹಾಗೂ ಅವರ ಕುಟುಂಬಗಳ ಆರೋಗ್ಯ ಮತ್ತು ಭದ್ರತೆಗೆ ಆದ್ಯತೆ ನೀಡುವ ಉದ್ದೇಶದಿಂದ ಆರೋಗ್ಯ ವಿಮೆ, ಆರೋಗ್ಯ ತಪಾಸಣಾ ಶಿಬಿರಗಳ ಆಯೋಜನೆ, ಪತ್ರಕರ್ತರ ಕ್ಷೇಮ ನಿಧಿ ಸ್ಥಾಪನೆ ಹಾಗೂ ರಕ್ತ ನಿಧಿ ರೂಪಿಸುವ ಯೋಜನೆಗಳನ್ನು ಸಂಘ ಹೊಂದಿದೆ.

ರಾಜ್ಯದ ಪ್ರತಿ ಜಿಲ್ಲೆಯಿಂದ ಕ್ರಿಯಾಶೀಲ ಹಾಗೂ ಉತ್ತಮ ವರದಿ ಸಲ್ಲಿಸುವ ಒಬ್ಬ ಪತ್ರಕರ್ತರನ್ನು ಆಯ್ಕೆ ಮಾಡಿ, ₹10,000 ನಗದು ಬಹುಮಾನ ನೀಡಿ ರಾಜ್ಯಮಟ್ಟದಲ್ಲಿ ಗೌರವಿಸುವ ಯೋಜನೆ ರೂಪಿಸಲಾಗಿದೆ. ನಿವೇಶನ ಹಾಗೂ ವಸತಿ ಸೌಲಭ್ಯವಿಲ್ಲದ ಪತ್ರಕರ್ತರಿಗೆ ಸರ್ಕಾರಿ ಯೋಜನೆಗಳಲ್ಲಿ ಮೊದಲ ಆದ್ಯತೆ ನೀಡುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಇದಲ್ಲದೆ ಪತ್ರಕರ್ತರಿಗಾಗಿ ಅಧ್ಯಯನ ಪ್ರವಾಸ, ತರಬೇತಿ ಕಾರ್ಯಾಗಾರ, ವೃತ್ತಿಪರ ಕೌಶಲಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಸಾಮಾಜಿಕ ಕಳಕಳಿಯನ್ನು ಬೆಳೆಸುವ ಉದ್ದೇಶದಿಂದ ನೇತ್ರದಾನ ನೋಂದಣಿ ಅಭಿಯಾನ ಹಾಗೂ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಗಿಡ ನೆಡುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಸ್ಥಳೀಯ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ, ಆಯಾ ಪ್ರದೇಶದ ಜನಸಮಸ್ಯೆಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳಲು ಸಂಘವು ಪ್ರಯತ್ನಿಸಲಿದೆ. ಪತ್ರಕರ್ತರ ಹಿತಾಸಕ್ತಿ ರಕ್ಷಣೆ, ಸಂಘಟನೆಯ ಬಲವರ್ಧನೆ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಉಳಿವಿಗಾಗಿ ಸಂಘ ರಾಜ್ಯಾದ್ಯಂತ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬೈಲಹೊಂಗಲ ಹಾಗೂ ಕಿತ್ತೂರು ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು.

ಬೈಲಹೊಂಗಲ ಘಟಕದ ತಾಲೂಕಾಧ್ಯಕ್ಷರಾಗಿ ಈರನಗೌಡ ಶೀಲವಂತರ, ಗೌರವಾಧ್ಯಕ್ಷ ಉಮೇಶ ಹಿರೇಮಠ, ನಗರ ಉಪಾಧ್ಯಕ್ಷ ಕುಮಾರ ಬೊರಕ್ಕನವರ, ಗ್ರಾಮೀಣ ಉಪಾಧ್ಯಕ್ಷ ಸೋಮಲಿಂಗಪ್ಪ ಭೋವಿ, ಕಿತ್ತೂರು ಘಟಕದ ಅಧ್ಯಕ್ಷ ಮಹಾಂತೇಶ ಕರಬಸನ್ನವರ ನೇಮಕ ಮಾಡಲಾಯಿತು. ಉಪಾಧ್ಯಕ್ಷರಾಗಿ ಜಗದೀಶ ಅಂಬಾರ್ ಗಣಿವಿ. ಕಾರ್ಯದರ್ಶಿ ಮಹೇಶ ಪೂಜೇರ ಸಂಘಟನಾ ಕಾರ್ಯದರ್ಶಿ ಇಮಾಹುಸೇನ್ ಬಿ. ಕುಡ್ಡನವರ ಸದಸ್ಯರಾಗಿ
*ಅಕೀಬ್ ಜಾವೇದ್ ಹೊನ್ನಾಪುರ ಇಮ್ರಾನ್ ನಾಯ್ಕವಾಡಿ ಶಿವಾನಂದ್ ಎಮ್ಮಿ ಫೀರೋಜ ಖಾದ್ರಿ, ಬಸವರಾಜ ಶಿರಸಂಗಿ, ಈರಣ್ಣ ಹೂಲ್ಲೂರ, ಮಹಾಂತೇಶ ಹಿರೇಮಠ, ಚೇತನ ಹಿರೇಮಠ, ದುಂಡಪ್ಪ ಹೂಲಿ, ಮೈನು ನದಾಫ್, ಶಿವು ಸಂಭೋಜಿ, ಉಮೇಶ ಗೌಡರ, ಗಣೇಶ ನಲವಡೆ, ಬಸವರಾಜ ಈಟಿ, ಬಸವರಾಜ ಲಕ್ಕನ್ನವರ, ಸದಾಶಿವಾನಂದ ಗಡದ, ಸಂಜಯ ಪೂಜೇರ, ಶಿವು ಹುಣಶೀಕಟ್ಟಿ, ಸಂತೋಷ ಬಾರಿಗಿಡದ, ವಿನಾಯಕ ಫಾಸಲಕರ, ವೀರಭದ್ರಪ್ಪ ಕೋಟಗಿ, ಶ್ರೀಧರ ಪಾಶಾಪುರ, ಸುದರ್ಶನ ಉಪಾದ್ಯೆ, ಸಮೀರ ಮುರಗೋಡ ಆಯ್ಕೆಯಾದರು.

ಇದೇ ವೇಳೆ ನೂತನ ಪದಾಧಿಕಾರಿಗಳಿಗೆ ಆದೇಶ ಪ್ರತಿ ನೀಡಲಾಯಿತು.

ಸಭೆಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್, ಕಾರ್ಯದರ್ಶಿ ಎಂ.ಸಿ.ಗಣ್ಯರಾದ ರಾಜು ಭರಮಗೌಡರ ಬಿ ಎಂ ಚಿಕ್ಕನಗೌಡರ ಮಂಜುನಾಥ ಸಂಘದ ಸದಸ್ಯರು ಇದ್ದರು.

ವಿನಾಯಕ ಫಾಸಲಕರ ಸ್ವಾಗತಿಸಿದರು, ಕುಮಾರ ಬೋರಕನವರ ನಿರೂಪಿಸಿ, ವಂದಿಸಿದರು.
ಹಕ್ಕುತ್ಯಾಗ
ಈ ಲೇಖನವು AI ಬಳಸಿ ರಚಿತವಾಗಿರಬಹುದು, ಸಂಪಾದಿಸಿರಬಹುದು ಅಥವಾ ಅನುವಾದಿಸಿರಬಹುದು ಹಾಗೂ ಇದರಲ್ಲಿ ವಾಸ್ತವಾಂಶ, ಭಾಷಾಂತರ ಅಥವಾ ಸಾಂದರ್ಭಿಕ ದೋಷಗಳಿರಬಹುದು. ಪ್ರಮುಖ ಮಾಹಿತಿಯನ್ನು ಅಧಿಕೃತ ಮೂಲಗಳಿಂದ ದೃಢಪಡಿಸಿಕೊಳ್ಳಲು ಓದುಗರಿಗೆ ಸಲಹೆ ನೀಡಲಾಗುತ್ತದೆ. AI-ನೆರವಿನ ವಿಷಯದಿಂದ ಉಂಟಾಗುವ ಯಾವುದೇ ತಪ್ಪುಗಳಿಗೆ ಪ್ರಕಾಶಕರು ಜವಾಬ್ದಾರರಾಗಿರುವುದಿಲ್ಲ. ಕಾನೂನು ಹಕ್ಕುತ್ಯಾಗ
TAGS: ಪತ್ರಕರ್ತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ ರಾಜಶೇಖರ್
SHARE THIS ARTICLE
B

B News Desk

Senior Staff Journalist and Correspondent at B News. Covering breaking global stories, contemporary culture, and modern innovations.

B News Live Search

Search Articles

Type any keyword to instantly search stories across categories.
Send News